ಕೊರಟಗೆರೆ : 2 ಕೋಟಿ ವೆಚ್ಚದಲ್ಲಿ ಕೋಟೆ ಮಾರಮ್ಮ ದೇಗುಲ ಉದ್ಘಾಟನೆ

ಕೊರಟಗೆರೆ :

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರೋ ಇತಿಹಾಸ ಪ್ರಸಿದ್ಧ ಕೊರಟಗೆರೆ ಪಟ್ಟಣದ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಾಲಯದ ಉದ್ಘಾಟನೆ ಹಾಗೂ ದೇವರುಗಳ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ ಗ್ರಾಮ ದೇವತೆ ಕೋಟೆ ಮಾರಮ್ಮ ದೇವಾಲಯವನ್ನು ನಿರ್ಮಾಣ ಮಾಡಿದ್ದು, ಶ್ರೀಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ಕಟ್ಟಡ ನಿರ್ಮಾಣ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ದೇವಾಲಯದ ಉದ್ಘಾಟನೆಯನ್ನು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಹಾಗೂ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ನೇರವೇರಿಸಲಿದ್ದಾರೆ ಎಂದು ದೇಗುಲದ ಪ್ರಧಾನ ಅರ್ಚಕರು ತಿಳಿಸಿದ್ದಾರೆ.

ದೇವಾಲಯದ ಉದ್ಘಾಟನೆ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ್‌ ಆಚಾರ್‌ ಮಾತನಾಡಿ, ಕೊರಟಗೆರೆಯ ಕೋಟೆ ಮಾರಮ್ಮನಿಗೂ ಮೈಸೂರಿಗೂ ನಂಟು ಇದೆ. ಈಗಲೂ ಕೂಡ ಮೈಸೂರಿನಲ್ಲಿ ಕೊರಟಗೆರೆ ಕೋಟೆ ಮಾರಮ್ಮ ತಾಯಿಯ ದೇವಸ್ಥಾನವಿದೆ ಎಂದು ಹೇಳಿದರು. ಅಲ್ಲದೇ ದೇವಸ್ಥಾನದ ಉದ್ಘಾಟನೆಯ ನಂತರ ನಿಮ್ಮ ಮುಂದೆ  ಕೊರಟಗೆರೆ ಕೋಟೆ ಮಾರಮ್ಮ ತಾಯಿ ಹಾಗೂ ಕೊಲ್ಲಾಪುರದಮ್ಮ ತಾಯಿಯ ಇತಿಹಾಸವನ್ನು ತರುವ ಪ್ರಯತ್ನ ಮಾಡುತ್ತೇವೆ ಎಂದರು.

ದೇವಾಲಯದ ಸಮಿತಿಯ ಅಧ್ಯಕ್ಷರಾದ ಬಲರಾಮಯ್ಯ ಮಾತನಾಡಿ, ದೇವಸ್ಥಾನವನ್ನು ಇದೇ 29 ರಂದು ಉದ್ಘಾಟನೆ ಮಾಡಲಾಗ್ತಿದ್ದು, ಅಂದಿನಿಂದ ಮೇ 1 ರವರೆಗೆ ಕೊರಟಗೆರೆ ಪಟ್ಟಣದಲ್ಲಿ ಮಾಂಸ ಆಹಾರ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.  ಇದೇ ತಿಂಗಳ 29 ರಿಂದ ಮೇ 1ರವರೆಗೆ ದೇವಸ್ಥಾನ ಉದ್ಘಾಟನಾ ಸಮಾರಂಭ ನೆರವೇರಲಿದ್ದು, 48 ದಿನಗಳ ಕಾಲ ದೇಗುಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ, ಅಲ್ಲದೇ ದೇಗುಲದ ಉದ್ಘಾಟನಾ ಸಮಾರಂಭಕ್ಕೆ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್, ಕೇಂದ್ರ ಸಚಿವರಾದ ವಿ. ಸೋಮಣ್ಣ, ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ,ಶಾಸಕರಾದ ಟಿ.ಬಿ ಜಯಚಂದ್ರ, ವಿಧಾನ ಪರಿಷತ್ ಸದಸ್ಯ  ಆರ್. ರಾಜೇಂದ್ರ, ಮಾಜಿ ಶಾಸಕ ಸುಧಾಕರ್‌ ಲಾಲ್‌ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ದೇವಸ್ಥಾನದ ಸಮಿತಿಯ  ಅಧ್ಯಕ್ಷರಾದ ಎ.ಡಿ ಬಲರಾಮಯ್ಯ ತಿಳಿಸಿದರು.

Author:

...
Sushmitha N

Copy Editor

prajashakthi tv

share
No Reviews