ಕೊರಟಗೆರೆ:
ಕರ್ನಾಟಕದಲ್ಲಿರೋ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯೆ ಮಾಯವಾಗಿದ್ದು, ಕನ್ನಡಿಗರನ್ನು ಕೆರಳಿಸುವಂತೆ ಮಾಡ್ತಿದೆ. ಬ್ಯಾಂಕ್‌ನ ಬೋರ್ಡ್ ಮಾತ್ರ ಕನ್ನಡದಲ್ಲಿ ಇರುತ್ತೆ ಒಳಗೆ ಎಂಟ್ರಿ ಆದ್ರೆ ಫುಲ್ ಇಂಗ್ಲೀಷ್, ಇಲ್ಲವೇ ಬೇರೆ ಭಾಷೆಯಲ್ಲಿ ವ್ಯವಹರಿಸೋದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ಅದ್ರಲ್ಲೂ ಮಣಪುರಂ ಗೋಲ್ಡ್ ಲೋನ್ ಸೇರಿ ಇತರೆ ಗೋಲ್ಡ್ ಲೋನ್ ಕಂಪನಿಗಳಲ್ಲಿ ತಮಿಳು, ಮಲೆಯಾಳಂ ಭಾಷೆಯ ದರ್ಬಾರ್ ಜೋರಾಗಿದೆ.
ಕೇರಳದ ಮನಪುರಂ ಗೋಲ್ಡ್ ಲೋನ್ ಬ್ಯಾಂಕ್ ಶಾಖೆ ಕೊರಟಗೆರೆ ಪಟ್ಟಣದಲ್ಲಿದ್ದು, ಹೊರಗಡೆ ಮಾತ್ರ ಕನ್ನಡ ಮತ್ತು ಇಂಗ್ಲಿಷ್‌ನ ನಾಮಫಲಕ ಇದೆ ಅಷ್ಟೇ.ಆದರೇ ಒಳಗಡೆ ಮಾತ್ರ ತಮಿಳು ಮತ್ತು ಕೆರಳ ಮಲಯಾಳಂ ಭಾಷೆಯ ದರ್ಬಾರ್ ಇದೆ.ಇದನ್ನ ಯಾರು ಹೇಳೋರು ಇಲ್ಲ ಕೇಳೋರು ಇಲ್ಲದಿರೋದು ನಮ್ಮ ಕನ್ನಡಿಗರ ದುರ್ದೈವವಾಗಿದೆ.
ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿನ ಮಣಪುರಂ ಗೋಲ್ಡ್ಲೋನ್ ಮೈಕ್ರೋ ಪೈನಾನ್ಸ್ ನೂರಾರು ಹಳ್ಳಿಯ ಸುಮಾರು 4200ಕ್ಕೂ ಹೆಚ್ಚು ಗ್ರಾಹಕರಿದ್ದಾರೇ. ಗ್ರಾಮೀಣ ಭಾಗದ ಗ್ರಾಹಕರಿಗೆ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಆದ್ರೆ ಬ್ಯಾಂಕ್ ಶಾಖೆಯ ಒಳಗಡೆ ಸಮಯ ತೋರಿಸುವ ಫಲಕವೂ ಕೂಡ ಕೇರಳ ಮತ್ತು ತಮಿಳು ಭಾಷರಯಲ್ಲಿದೆ. ಇದು ಕನ್ನಡಿಗರು ಸಾಮಾನ್ಯ ಜನರು ಹೇಗೆ ಅರ್ಥ ಮಾಡಿಕೊಳ್ತಾರೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇನ್ನೂ ಶಾಖೆಯ ಗ್ರಾಹಕರು ಕನ್ನಡ ಭಾಷೆಯ ನಾಮಫಲಕದ ಬಗ್ಗೆ ಪ್ರಶ್ನಿಸಿದ್ರೇ ನೀವು ಬಂದಿರುವ ಕೆಲಸಮಾಡಿಕೊಂಡು ಹೋಗಿ. ಕನ್ನಡಪರ ಸಂಘಟನೆಯವ್ರೇ ಸುಮ್ಮನೇ ಇದ್ದಾರೇ. ನೀವು ಯಾರು ಕೇಳೋದಿಕ್ಕೆ ನಮಗೇ ಯಾವುದು ಬೇಕೋ ಅದನ್ನೇ ಹಾಕ್ತೀವಿ ಎಂಬ ದಬ್ಬಾಳಿಕೆ ಮಾಡ್ತಾರೆ ಎಂದು ಗ್ರಾಹಕರು ಆಕ್ರೋಶ ಹೊರಹಾಕ್ತಿದ್ದಾರೆ.
ಮಣಪುರಂ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಮಾರುತೀಶ ಅವರನ್ನು ಮಾಧ್ಯಮದವ್ರು ಪ್ರಶ್ನೆ ಮಾಡಿದ್ರೇ ನಮಗೇ RBI ಗೈಡ್‌ಲೈನ್ ಮತ್ತು ಬ್ಯಾಂಕಿನ ಮುಖ್ಯಸ್ಥರ ಆದೇಶವಿದೆ. ಅದಕ್ಕಾಗಿ ನಾವು ಹಾಕಿದ್ದೇವೆ ಅಷ್ಟೇ.ಮುಖ್ಯಸ್ಥರ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ ಅಷ್ಟೆ ಎಂಬ ಉಡಾಫೆಯ ಉತ್ತರ ನೀಡುವುದು ಸಾಮಾನ್ಯವಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಕನ್ನಡ ಧ್ವಜ ಸ್ತಂಭ ತೆರವು ಮಾಡಿದ್ದಕ್ಕೆ ಕೊರಟಗೆರೆ ಪಟ್ಟಣ ಅಕ್ಷರಶಃ ಕೊತ ಕೊತ ಕುದಿಯುವಂತೆ ಆಗಿತ್ತು. ಕನ್ನಡ ಪರ ಹೋರಾಟಗಾರರು ಹೋರಾಟ ಮಾಡಿ ಕನ್ನಡ ಧ್ವಜ ಮರು ಸ್ಥಾಪನೆ ಮಾಡುವಂತೆ ಆಗ್ರಹ ಕೂಡ ಮಾಡಿದ್ರು, ಈಗ ಮಣಪುರಂ ಗೋಲ್ಡ್ ಲೋನ್ ಶಾಖೆಯಲ್ಲಿ ಕನ್ನಡಕ್ಕೆ ಆಗ್ತಿರೋ ಅಪಮಾನ ಹೋರಾಟ ಮತ್ಯಾವ ತಿರುವು ಪಡೆಯುತ್ತೋ ಕಾದುನೋಡಬೇಕಿದೆ. ಕನ್ನಡ ಪರ ಹೋರಾಟಗಾರರು ಕನ್ನಡ ನಾಮಫಲಕ್ಕೆ ಹೋರಾಟ ಮಾಡಿದ್ರೆ ಸಾಲದು ಬ್ಯಾಂಕ್‌ನ ಒಳಗಡೆ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸಲು ಹೋರಾಟ ಮಾಡಬೇಕಿದೆ.