KEA : ಪರೀಕ್ಷಾ ಅಕ್ರಮಗಳಿಗೆ ಬ್ರೇಕ್ ಹಾಕಲು ಕೆಇಎ ಹೊಸ ಪ್ಲಾನ್

KEA :

ಇನ್ಮುಂದೆ ಪರೀಕ್ಷಾ ಅಕ್ರಮಗಳಿಗೆ ತಡೆ ಹಾಕಲು ಕೆಇಎ ಹೊಸ ಪ್ಲಾನ್‌ ರೆಡಿ ಮಾಡಿದೆ. ಹೌದು ಮೊನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮುಂದಿನ ವೃತ್ತಿಪರ ಕೋರ್ಸ್‌ ಗಳಿಗೆ ಇದೇ ತಿಂಗಳು 15, 16, 17 ರಂದು ಸಿಇಟಿ ಪರೀಕ್ಷೆ ನಡೆಯುತ್ತಿದೆ . ಹೀಗಾಗಿ ಇದೇ ಮೊದಲ ಬಾರಿಗೆ ಸಿಇಟಿ ಪರೀಕ್ಷೆಯನ್ನು ಸಿಸಿಟಿವಿ ಕಣ್ಗಾವಲಲ್ಲಿ ವೆಬ್‌ ಕಾಸ್ಟಿಂಗ್‌ ಮೂಲಕ ನಡೆಸಲಾಗುತ್ತೇ. ಅಲ್ದೇ ಫೇಶಿಯಲ್‌ ರೆಕಗ್ನಿಷನ್‌ ಕೂಡ ಅರ್‌ ಕೋಡ್‌ ಸಹ ಆಗಲಿದೆ

ಮೊದಲ ಬಾರಿಗೆ ಸಿಸಿಟಿವಿ ಕಣ್ಗಾವಲಲ್ಲಿ ಲೈವ್ ಸ್ಟ್ರೀಮಿಂಗ್​ ಇರುತ್ತದೆ. ಮೂರು ದಿನಗಳ ಕಾಲ ನಡೆಯುವ ಪರೀಕ್ಷೆಗೆ ಒಟ್ಟು 3.30 ಲಕ್ಷ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು. ಫ್ರಿಸ್ಕಿಂಗ್ ಪ್ರಕ್ರಿಯೆ ಮೂಲಕ ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಉಂಟಾಗುವ ನೂಕು, ನುಗ್ಗಲು ಆಗದಂತೆ ಕ್ರಮ ವಹಿಸಲಾಗಿದೆ.

ಇನ್ನು ಪರೀಕ್ಷಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗಬಾರದೆಂದು ಒಎಂಅರ್‌ ಮಾದರಿ ಶೀಟ್‌ ಅನ್ನು ಮುಂಚಿತವಾಗಿಯೇ ಬಿಡುಗಡೆ ಮಾಡಿದ್ದು. ಜೊತೆಗೆ ಹಾಲ್​ ಟಿಕೆಟ್​ನಲ್ಲಿ QR ಕೂಡ ನೀಡಲಾಗಿದೆ. QR ಸ್ಕ್ಯಾನ್ ಮಾಡಿದಾಗ ಅಭ್ಯರ್ಥಿಯ ಫೋಟೋ ಜೊತೆಗೆ ಸಂಪೂರ್ಣ ಮಾಹಿತಿ ಸಿಗುತ್ತೇ .

Author:

share
No Reviews