Katrina Kaif : ಮಾಲ್ಡೀವ್ಸ್‌ ರಾಯಭಾರಿಯಾಗಿ ನಟಿ ಕತ್ರೀನಾ ಕೈಫ್‌ ಆಯ್ಕೆ

KATRINA KAIF : ಮಾಲ್ಡೀವ್ಸ್‌ನ ಜಾಗತೀಕ ಬ್ರಾಂಡ್‌ ರಾಯಭಾರಿಯಾಗಿ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಆಯ್ಕೆಯಾಗಿದ್ದಾರೆ. ಮಾಲ್ಡೀವ್ಸ್ ಅನ್ನು ಜನಪ್ರಿಯ ಪ್ರವಾಸಿ ತಾಣವಾಗಿ ಪರಿಚಯಿಸುವ ಭಾಗವಾಗಿ, ಮಾಲ್ಡೀವ್ಸನ ಪ್ರವಾಸೋದ್ಯಮ ಪ್ರಚಾರ ಸಂಸ್ಥೆಯಾದ  ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್  ಕತ್ರಿನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದುಘೋಷಿಸಿದೆ.

ಮಾಲ್ಡೀವ್ಸ್‌ ಪ್ರವಾಸಿಗರಿಗೆ ನೆಚ್ಚಿನ ಸ್ಥಳ ಎಂದು ಹೇಳಬೇಕಾಗಿಲ್ಲ, ನೀಲಿ ಸಮುದ್ರವನ್ನು ಕಾಣಲು ಅನೇಕ ಜನರು ನಟ, ನಟಿಯರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಮಾಲ್ಡೀವ್ಸ್‌ ನೈಸರ್ಗಿಕ ಸೌಂದರ್ಯ ಮತ್ತು ನೆಮ್ಮದಿಯ ಸ್ಥಳವಾಗಿದೆ.

ಮಾಲ್ಡೀವ್ಸ್ ಕೂಡ ಭಾರತದೊಂದಿಗಿನ ತನ್ನ ಸಂಬಂಧವನ್ನು ರಾಜಕೀಯವಾಗಿ ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುರ್ಸಿ ನೀಡಿದ ಆಹ್ವಾನಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಜುಲೈನಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಪ್ರಚಾರ ಅಭಿಯಾನ ನಡೆಯುತ್ತಿದೆ.

Author:

...
Sushmitha N

Copy Editor

prajashakthi tv

share
No Reviews