ಕರುಣ್ ನಾಯರ್ :
ಡಿಯರ್ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು. ಇದೊಂದು ಟ್ವೀಟ್ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸ್ತಿದೆ. ಕಾರಣ ಕನ್ನಡಿಗ ಕರುಣ್ ನಾಯರ್ ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ್ದ ರೀತಿ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ನಿನ್ನೆ ಮಿಂಚಿನ ಪ್ರದರ್ಶನ ನೀಡಿರೋ ಕರುಣ್ ನಾಯರ್ ಮಾಡಿದ್ದ ಈ ಟ್ವೀಟ್ ಇದೀಗ ಇಂಟರ್ನೆಂಟ್ ತುಂಬೆಲ್ಲಾ ಹರಿದಾಡ್ತಿದೆ. ಅಸಲಿಗೆ ಇದು ಮೂರು ವರ್ಷಗಳ ಹಿಂದೆ. ಅಂದರೆ 2022ರಲ್ಲಿ ಮಾಡಿದ್ದ ಟ್ವೀಟ್, ಆದರೆ ಈಗ ಈ ಟ್ವೀಟ್ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಕರುಣ್ ನಾಯರ್ ವಿಜಯ್ ಹಜಾರೆ ಟ್ರೋಪಿ, ರಣಜಿ ಟೂರ್ನಿಗಳಲ್ಲಿ ಪ್ರತಿಬಾರಿ ಶತಕ ಹೊಡೆದಾಗಲೂ ಈ ಟ್ವೀಟ್ ಇಂಟರ್ನೆಂಟ್‌ನಲ್ಲಿ ಸದ್ದು ಮಾಡ್ತಿತ್ತು. ಆದರೆ ಈಗ ಐಪಿಎಲ್ ವೇಳೆಯೂ ಈ ಪೋಸ್ಟ್ ಮತ್ತೆ ಹಲ್‌ಚಲ್ ಎಬ್ಬಿಸಿದೆ. ಲಕ್ಷಾಂತರ ಮಂದಿ ಈ ಟ್ವೀಟನ್ನು ಪೋಸ್ಟ್ ಮಾಡಿಕೊಳ್ತಿದ್ದಾರೆ. ಅಷ್ಟೇ ಏಕೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಐಪಿಎಲ್ ನ ಅಧಿಕೃತ ಎಕ್ಸ್ ಖಾತೆಗಳಲ್ಲೂ ಇದನ್ನು ರೀಪೋಸ್ಟ್ ಮಾಡಲಾಗಿದೆ.
ಕಳೆದ ಒಂದು ವರ್ಷದಿಂದ ಕನ್ನಡಿಗ ಕರುಣ್ ನಾಯರ್ ನೀಡ್ತಿರುವ ಪ್ರದರ್ಶನವೇ ಹಾಗಿತ್ತು. ವಿಜಯ್ ಹಜಾರೆ ಟ್ರೋಪಿ ಆಯ್ತು, ರಣಜಿ ಟ್ರೋಪಿ ಆಯ್ತು. ಇದೀಗ ಐಪಿಎಲ್ ನಲ್ಲಿಯೂ ತನ್ನ ತಾಕತ್ತು ಏನು ಅನ್ನೋದನ್ನು ಮತ್ತೊಮ್ಮೆ ಕ್ರಿಕೆಟ್ ಜಗತ್ತಿಗೆ ತೋರಿಸಿ ಬಿಟ್ಟಿದ್ದಾರೆ ಕರುಣ್ ನಾಯರ್. ಬೂಮ್ ಬೂಮ್ ಬೂಮ್ರಾನನ್ನು ಬಿಡಲಿಲ್ಲ. ಬೌಲ್ಟ್ ಗೆ ನಟ್ಟು ಟೈಟ್ ಮಾಡೋದನ್ನೂ ಮರೆಯಲಿಲ್ಲ. ಮುಂಬೈ ವಿರುದ್ಧ ರೋಷಾವೇಷವನ್ನೇ ಮೆರೆದಿದ್ದಾನೆ. ಕರುಣ್ ನಾಯರ್.
ದಿಲ್ಲಿ ಕ್ಯಾಪಿಟಲ್ಸ್ VS ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಕೇವಲ 40 ಎಸೆತಗಳಿಂದ 12 ಬೌಂಡರಿ ಮತ್ತು 5 ಸಿಕ್ಸರ್ ಗಳ 89 ರನ್ ಗಳಿಸಿ ಡೆಲ್ಲಿ ತಂಡಕ್ಕೆ ಆಸರೆಯಾದರು, ಇಡೀ ಪಂದ್ಯ ಕರುಣ್ ನಾಯರ್ ರ್ಶೋ ಆಗೇ ಮಾರ್ಪಟ್ಟಿತ್ತು ಅಂದ್ರೆ ಸುಳ್ಳಲ್ಲ. ಸುಮಾರು 7ವರ್ಷಗಳ ನಂತ್ರ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಕನ್ನಡಿಗ ಕರುಣ್ ನಾಯರ್ ಎಂಟ್ರಿ ನೀಡಿದ್ದು, ಈತ ಬೀಸುತ್ತಿದ್ದ ಒಂದೊಂದು ರನ್ ಸಹ ತನ್ನನ್ನ ನಿರ್ಲಕ್ಷ್ಯ ಮಾಡಿದ ಬಿಸಿಸಿಐ ಆಯ್ಕೆ ಮಂಡಳಿಗೆ ಕಪಾಳ ಮೋಕ್ಷ ಮಾಡಿದಂತಿತ್ತು.
ಒಟ್ಟಿನಲ್ಲಿ ಕರುಣ್ ನಾಯರ್ ವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿ ಯಾಕಿಷ್ಟು ನಿರ್ಲಕ್ಷ್ಯ ಮಾಡ್ತಿದ್ಯೋ ಗೊತ್ತಿಲ್ಲ, ಇನ್ನು ಕರುಣ್ ನಾಯರ್ ವಿಜಯ್ ಹಜಾರೆ, ರಣಜಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದು, ಇದೀಗ ಚುಟುಕು ಕ್ರಿಕೆಟ್ ನಲ್ಲೂ ತಾನು ತಂಡದ ಆಸ್ತಿಯಾಗಬಲ್ಲೆ ಅಂತ ಕರುಣ್ ನಾಯರ್ ಸಾಬೀತು ಪಡಿಸ್ತಾ ಇದಾರೆ.