ಕಲಬುರಗಿ: 7 ದಿನದ ಕಂದಮ್ಮ, ಬಾಣಂತಿ ಹೆಂಡ್ತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ

ಕಲಬುರಗಿ :

ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಹಿನ್ನೆಲೆ ರಜೆಯಲ್ಲಿದ್ದ ಕರ್ನಾಟಕದ ಹಲವು ಯೋಧರನ್ನು ಸೇನೆ ಮತ್ತೆ ಕರೆಸಿಕೊಂಡಿದೆ. ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸುತ್ತಿರುವ ಸಂಕಟದ ಸಂದರ್ಭದಲ್ಲಿ, ಹನುಮಂತರಾಯ್ ಎಂಬ ಯೋಧ ಅವರು ಪತ್ನಿಯ ಡೆಲಿವರಿಗಾಗಿ ತೆಗೆದುಕೊಂಡಿದ್ದ ರಜೆಯನ್ನು ಅರ್ಧದಲ್ಲೇ ಮುಗಿಸಿ ಸೇವೆಗೆ ಮರಳಿದ್ದಾರೆ.

ಪತ್ನಿಗೆ ಹೆರಿಗೆ ಹಿನ್ನೆಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ ಸ್ವಗ್ರಾಮಕ್ಕೆ ಬಂದಿದ್ದರು. 20 ವರ್ಷದಿಂದ ಸಿಆರ್​​ಪಿಫ್​​ನಲ್ಲಿ ಸೇವೆ ಸಲ್ಲಿಸುತ್ತಿರುವ ಹಣಮಂತರಾಯ್, ಪ್ರಸಕ್ತ ಶ್ರೀನಗರದಲ್ಲಿ ಸೇವೆಯಲ್ಲಿದ್ದಾರೆ. 1 ತಿಂಗಳು ರಜೆ ಪಡೆದು ಏ.25ರಂದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಗಂಡು ಮಗು ಜನಿಸಿದ ಒಂದು ವಾರದಲ್ಲೇ ಕರ್ತವ್ಯಕ್ಕೆ ತೆರಳಿದ್ದು, ಕಲಬುರಗಿ ನಿಲ್ದಾಣದಲ್ಲಿ ​ಕುಟುಂಬಸ್ಥರು‌ ಹಣಮಂತರಾಯ್ ಅವರನ್ನು ಬೀಳ್ಕೊಟ್ಟಿದ್ದಾರೆ.

Author:

...
Keerthana J

Copy Editor

prajashakthi tv

share
No Reviews