ಕಲಬುರಗಿ : ಪಿಯುಸಿ ಪರೀಕ್ಷೆ ಬರೆದಿದ್ದ ನಕಲಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ನಕಲು ಪರೀಕ್ಷೆ ಬರೆದ ಸಂಪೂರ್ಣಾ ಪಾಟೀಲ್
ನಕಲು ಪರೀಕ್ಷೆ ಬರೆದ ಸಂಪೂರ್ಣಾ ಪಾಟೀಲ್
ಕಲಬುರ್ಗಿ

ಕಲಬುರಗಿ:

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ನಡೆಯುತ್ತಿದ್ದು, ಮಾರ್ಚ್‌ 5 ರಂದು ನಡೆದ ರಾಜ್ಯ ಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯ ಬದಲಿಗೆ ಕಾಂಗ್ರೇಸ್‌ ಕಾರ್ಯಕರ್ತೆಯೊಬ್ಬರು ಪರೀಕ್ಷೆ ಬರೆದಿರುವ ಘಟನೆ ಕಲಬುರಗಿ ಜಿಲ್ಲೆಯ ಮಿಲಿಂದ್‌ ಕಾಲೇಜಿನಲ್ಲಿ ನಡೆದಿದೆ.

ಮಿಲಿಂದ್‌ ಕಾಲೇಜಿನಲ್ಲಿ ನೆನ್ನೆ ನಡೆದ ಪರೀಕ್ಷೆಯಲ್ಲಿ ಅರ್ಚನಾ ಎಂಬ ವಿದ್ಯಾರ್ಥಿನಿಯ ಬದಲಿಗೆ ಕಾನೂನು ವಿದ್ಯಾರ್ಥಿನಿಯಾಗಿರುವ ಕಾಂಗ್ರೇಸ್‌ ಕಾರ್ಯಕರ್ತೆ ಸಂಪೂರ್ಣಾ ಪಾಟೀಲ್‌ ಪರೀಕ್ಷೆ ಬರೆದಿದ್ದಾರೆ. ವಿಷಯ ತಿಳಿದು ದಲಿತ ಸೇನೆಯ ಕಾರ್ಯಕರ್ತರು ಕಾಲೇಜಿಗೆ ತೆರಳಿ ಅಕ್ರಮವನ್ನು ಪ್ರಶ್ನಿಸಿದಾಗ ಪರೀಕ್ಷೆಯ ವಿಚಾರ ಬೆಳಕಿಗೆ ಬಂದಿದೆ.

ಮಿಲಿಂದ್‌ ಕಾಲೇಜಿನ ಪ್ರಾಂಶುಪಾಲರು ಬ್ರಹ್ಮಪೂರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸಂಪೂರ್ಣಾ ಪಾಟೀಲ್‌ ಳನ್ನು ವಶಕ್ಕೆ ಪಡೆದಿದ್ದಾರೆ.

Author:

...
Editor

ManyaSoft Admin

share
No Reviews