ISRO : ಇಸ್ರೋ 101 ನೇ ಉಪಗ್ರಹ ಉಡಾವಣೆ ವಿಫಲ | PSLV-C61 ಉಡಾವಣೆ 3ನೇ ಹಂತದಲ್ಲಿ ಅಡಚಣೆ

ISRO : ಇಂದು ಬೆಳಿಗ್ಗೆ 5:59 ರ ಸುಮಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ 101ನೇ ಉಪಗ್ರಹ ಉಡಾವಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ PSLV-C61 ರಾಕೆಟ್ ಮೂಲಕ ನಡೆಸಿತು. ಈ ಉಡಾವಣೆಯಲ್ಲಿ EOS-09 ರೆಡಾರ್ ಇಮೇಜಿಂಗ್ ಉಪಗ್ರಹವನ್ನು ನಭಕ್ಕೆ ಕಳುಹಿಸುವ ಉದ್ದೇಶ ಹೊಂದಿದ್ದ ಈ ಉಡಾವಣೆಯ ಆರಂಭದಲ್ಲಿ ಯಶಸ್ವಿಯಾಗಿ ಸಾಗಿದ್ದು, ಎರಡನೇ ಹಂತದವರೆಗೆ ಸಾಮಾನ್ಯ ಕಾರ್ಯಕ್ಷಮತೆ ಸಾಗಿತ್ತು, ಆದರೆ ಉಡಾವಣೆಯ ನಂತರ ತೃತೀಯ ಹಂತದಲ್ಲಿ ತಾಂತ್ರಿಕ ದೋಷವು ಸಂಭವಿಸಿದ ಪರಿಣಾಮ, ಉಪಗ್ರಹ ನಿರ್ದಿಷ್ಟ ಕಕ್ಷೆಗೆ ಸೇರುವಲ್ಲಿ ವಿಫಲವಾಯಿತು.

ಇದು ಇಸ್ರೋದ 101ನೇ ಉಡಾವಣೆ ಪ್ರಯತ್ನವಾಗಿದ್ದು, EOS-09 ಉಪಗ್ರಹವು 500 ಕಿಲೋಮೀಟರ್‌ ಎತ್ತರದ ಭೂಮಿಯ ವೀಕ್ಷಣಾ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸುವಂತಿತ್ತು. ಇದರಲ್ಲಿ ರೆಡಾರ್ ಇಮೇಜಿಂಗ್ ತಂತ್ರಜ್ಞಾನವಿದ್ದು, ಇದು ಕೃಷಿ, ವನ್ಯಜೀವಿ ನಿರ್ವಹಣೆ, ನಗರ ಯೋಜನೆ ಮತ್ತು ಭದ್ರತೆ ಸಂಬಂಧಿತ ಅನೇಕ ಕ್ಷೇತ್ರಗಳಲ್ಲಿ ಉಪಯುಕ್ತವಾಗುತ್ತದೆ.

ಈ ವಿಫಲತೆಯ ಕುರಿತು ಇಸ್ರೋ ಅಧಿಕೃತವಾಗಿ ತನಿಖೆ ಆರಂಭಿಸಿದ್ದು, ತಾಂತ್ರಿಕ ಕಾರಣಗಳ ಸಂಪೂರ್ಣ ವಿಶ್ಲೇಷಣೆಗೆ ಮುಂದಾಗಲಿದೆ.

Author:

...
Sushmitha N

Copy Editor

prajashakthi tv

share
No Reviews