TUMAKURU: ಶ್ರೀದೇವಿ ಕರ್ಮಕಾಂಡದ ವಿಚಾರದಲ್ಲಿ ನಾಟಕವಾಡ್ತಿದ್ಯಾ ತುಮಕೂರು ಜಿಲ್ಲಾಡಳಿತ?

ತುಮಕೂರು: 

ತುಮಕೂರು ಜಿಲ್ಲಾಡಳಿತ ಆಡ್ತಾ ಇರೋ ಈ ಆಟಕ್ಕೆ ನಾಟಕ ಅನ್ಬೇಕೋ, ಮತ್ತಿನ್ನೇನು ಹೇಳ್ಬೇಕೋ ನಮಗಂತೂ ಗೊತ್ತಾಗ್ತಿಲ್ಲ. ಯಾಕಂದ್ರೆ ಶ್ರೀದೇವಿ ಆಸ್ಪತ್ರೆ ಟನ್‌ಗಟ್ಟಲೇ ಮೆಡಿಕಲ್‌ ತ್ಯಾಜ್ಯವನ್ನ ಗುಡ್ಡೆ ಹಾಕಿ, ಅವುಗಳನ್ನ ಸುಟ್ಟು ಇಡೀ ತುಮಕೂರಿನ ಜನರಿಗೆ ವಿಷವುಣಿಸೋಕೆ ಹೊರಟಿತ್ತು. ಈ ವಿಚಾರವನ್ನ ನಿಮ್ಮ ಪ್ರಜಾಶಕ್ತಿ ಟಿವಿ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಅಲ್ಲಿನ ಸಂಪೂರ್ಣ ದೃಶ್ಯಗಳ ಜೊತೆಗೆ ಅಧಿಕಾರಿಗಳ ಮತ್ತು ಜನರ ಮುಂದಿಡುವ ಕೆಲಸ ಮಾಡಿತ್ತು. ಶ್ರೀದೇವಿ ಆಸ್ಪತ್ರೆಯವರು ಮಾಡ್ತಿರೋದು ಎಷ್ಟು ಡೇಂಜರಸ್‌ ಕೆಲ್ಸ, ಇದರಿಂದ ಜನರಿಗೆ ಮಾತ್ರವಲ್ಲ, ಪ್ರಾಣಿ ಸಂಕುಲಕ್ಕೆ ಏನೆಲ್ಲಾ ಹಾನಿಯಾಗುತ್ತೆ ಅನ್ನೋದನ್ನ ಕಣ್ಣಿಗೆ ಕಟ್ಟುವಂತೆ ವರದಿ ಮಾಡಿದ್ವಿ. ಆದ್ರೆ ಪಾಪಾ ನಮ್ಮ ತುಮಕೂರಿನ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಾಗಿಬಿಟ್ಟಿದ್ದಾರೆ. ನಮ್ಮ ಜಿಲ್ಲಾಧಿಕಾರಿಯವರಿಗಂತೂ ಇದಕ್ಕೆಲ್ಲ ಸಮಯ ಇದ್ಯೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ ಈ ಶ್ರೀದೇವಿ ಆಸ್ಪತ್ರೆಯವರು ವರ್ಷಗಳಿಂದ ಮೆಡಿಕಲ್‌ ತ್ಯಾಜ್ಯವನ್ನ ಗುಡ್ಡೆ ಹಾಕ್ತಿದ್ದ ಆ ಸ್ಥಳ ಇರೋದು ಜಿಲ್ಲಾಧಿಕಾರಿ ಬಂಗಲೆಯಿಂದ ಕೂಗಳತೆ ದೂರದಲ್ಲಿ. ಆದ್ರೆ ನಮ್ಮ ಜಿಲ್ಲಾಧಿಕಾರಿಯವರು ಮಾತ್ರ ಇದುವರೆಗೂ ಒಮ್ಮೆಯೂ ಆ ಸ್ಥಳಕ್ಕೆ ಭೇಟಿಕೊಟ್ಟು ಅಲ್ಲಿನ ವಾಸ್ತವ ಏನು ಅನ್ನೋದನ್ನ ನೋಡಿದ್ದಾರೋ? ಇಲ್ವೋ ಗೊತ್ತಿಲ್ಲ. ಇನ್ನು ಕ್ರಮ ತೆಗೆದುಕೊಳ್ಳೋದು ದೂರದ ಮಾತು ಬಿಡಿ.

ಈ ವಿಚಾರವಾಗಿ ಇವತ್ತು ನಮ್ಮ ವರದಿಗಾರರು ಜಿಲ್ಲಾಧಿಕಾರಿಯವರನ್ನ ಪ್ರಶ್ನೆ ಮಾಡುವ ಕೆಲಸ ಮಾಡಿದ್ರು. ಜಿಲ್ಲಾಧಿಕಾರಿಯವ್ರು ಈ ಬಗ್ಗೆ ಏನ್‌ ಹೇಳಿದ್ರು ನೀವೇ ಕೇಳಿಸ್ಕೊಂಡು ಬಿಡಿ.

ನಮ್ಮ ವರದಿಗಾರರು ಕೇಳಿದ್ದೇ ಒಂದು. ಜಿಲ್ಲಾಧಿಕಾರಿ ಮೇಡಂ ಅವ್ರು ಹೇಳಿದ್ದೇ ಒಂದು. ಏನು ಕ್ರಮ ಆಗಿದೆ ಅನ್ನೋದನ್ನ ಹೇಳೋದು ಬಿಟ್ಟು ಮೇಡಂ ಅವ್ರು ಬೇರೆ ಎಲ್ಲವನ್ನ ಹೇಳಿದ್ದಾರೆ. ಅದ್ರ ಜೊತೆಗೆ ಇದೇ ವೇಳೆ ಜಿಲ್ಲಾಧಿಕಾರಿಯವ್ರು ಹೇಳ್ತಾರೆ. ಸದ್ಯ ಅಲ್ಲೆಲ್ಲಾ ಕ್ಲೀನ್‌ ಆಗಿದೆ ಅನ್ನೋ ಮಾಹಿತಿ ಬಂದಿದೆ ಅಂತಾ. ಹಾಗಿದ್ರೆ ಕ್ಲೀನ್‌ ಅಪ್‌ ಮಾಡ್ಬಿಟ್ರೆ ಮುಗೀತಾ? ಇಷ್ಟು ವರ್ಷಗಳ ಕಾಲ ಮೆಡಿಕಲ್‌ ತ್ಯಾಜ್ಯವನ್ನ ಗುಡ್ಡೆ ಹಾಕಿ, ಅದನ್ನ ಸುಟ್ಟು ಹಾಕಿ, ತುಮಕೂರಿಗರ ಜೀವದ ಜೊತೆ ಚೆಲ್ಲಾಟವವಾಡಿದವರ ವಿರುದ್ಧ ಕ್ರಮವೇ ಇಲ್ವಾ?

ಇನ್ನು ಈ ಬಗ್ಗೆ ಡಿಎಚ್‌ಓ ಕ್ರಮ ತೆಗೆದುಕೊಳ್ತಾರೆ ಅಂತಾ ಜಿಲ್ಲಾಧಿಕಾರಿಯವ್ರು ಹೇಳಿದ್ರು. ಹೀಗಾಗಿ ನಾವು ಡಿಎಚ್‌ಓ ಅವ್ರನ್ನ ಕೂಡ ಸಂಪರ್ಕಿಸಿ ಅವರನ್ನ ಮಾತನಾಡಿಸುವ ಕೆಲ್ಸ ಮಾಡಿದ್ವಿ. ಈ ವಿಚಾರವಾಗಿ ಏನೇನು ಕ್ರಮ ತೆಗೆದುಕೊಂಡಿದ್ದೀರಿ ಅಂತಾ ಕೇಳಿದ್ರೆ, ಒಂದು ನೋಟೀಸ್‌ ಕೊಟ್ಟಿದ್ದು ಬಿಟ್ಟರೆ ಆರೋಗ್ಯ ಇಲಾಖೆ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಇವ್ರು ಕೊಟ್ಟಿರೋ ನೋಟಿಸ್‌ ಗೂ ಶ್ರೀದೇವಿ ಆಸ್ಪತ್ರೆಯವರು ಈಗಾಗಲೇ ಉತ್ತರ ಕೊಟ್ಟುಬಿಟ್ಟಿದ್ದಾರಂತೆ.

ಇನ್ನು ಅವ್ರು ಕೊಟ್ಟಿರೋ ಉತ್ತರದಲ್ಲಿ, ಒಂದಿಷ್ಟು ದಾಖಲೆಗಳನ್ನ ಕೂಡ ಸಲ್ಲಿಸಿದ್ದಾರೆ. ಅದರಲ್ಲಿ ಅವ್ರು ಪ್ರಜ್ವಲ್‌ ಬಿಎಂಡಬ್ಲ್ಯೂ ಮ್ಯಾನೇಜ್‌ಮೆಂಟ್‌ ಸಿಸ್ಟಮ್ಸ್‌ ಅನ್ನೋ ಕಂಪನಿಯೊಂದಿಗೆ ಕಳೆದ ಎಪ್ರಿಲ್‌ ಒಂದನೇ ತಾರೀಖಿನಿಂದ ಬಯೋ ಮೆಡಿಕಲ್‌ ತ್ಯಾಜ್ಯ ವಿಲೇವಾರಿ ಮಾಡುವ ಉದ್ದೇಶದಿಂದ ಅಗ್ರಿಮೆಂಟ್‌ ಮಾಡಿಕೊಂಡಿದ್ದಾರೆ ಅನ್ನುವ ದಾಖಲೆಗಳನ್ನ ಸಲ್ಲಿಸಿದ್ದಾರೆ. ಜೊತೆಗೆ ಕಳೆದ ಒಂದು ತಿಂಗಳ ಒಂದಿಷ್ಟು ರಶೀದಿಗಳನ್ನ ಕೂಡ ಕೊಟ್ಟಿದ್ದಾರೆ. ಇದೆಲ್ಲಾ ಓಕೆ, ಆದ್ರೆ ನಾವು ಸಾಕ್ಷಿ ಸಮೇತ ಮಾಡಿರೋ ವರದಿಯಲ್ಲಿ ಟನ್‌ಗಟ್ಟಲೇ ಮೆಡಿಕಲ್‌ ತ್ಯಾಜ್ಯವನ್ನ ವರ್ಷಾನುಗಟ್ಟಲೇಯಿಂದ ಸುರಿದಿರುವ ಬಗ್ಗೆ ಸಾಕ್ಷಿಯಿದೆ. ಹೀಗಾಗಿ ಆರೋಗ್ಯ ಇಲಾಖೆಯವ್ರು ಶ್ರೀದೇವಿ ಆಸ್ಪತ್ರೆಯವರಿಗೆ ಕೇವಲ ಒಂದು ತಿಂಗಳ ಹಿಂದೆ ಆಗಿರೋ ಅಗ್ರಿಮೆಂಟು ಮತ್ತು ಆ ಕಂಪನಿಯ ರಶೀದಿಗಳನ್ನ ಮಾತ್ರವಲ್ಲ, ಅದಕ್ಕಿಂತ ಹಿಂದಿನ ಅಗ್ರಿಮೆಂಟ್‌, ಜೊತೆಗೆ ಅದರ ರಶೀದಿಗಳನ್ನ ಕೂಡ ತರಿಸಿಕೊಂದು ತನಿಖೆ ನಡೆಸಲಿ. ಅಷ್ಟೇ ಅಲ್ಲ, ನಾವು ಅಲ್ಲಿ ವಿಲೇವಾರಿಗಾಗಿ ಸುರಿದಿದ್ದ ಮೆಡಿಕಲ್ ತ್ಯಾಜ್ಯಕ್ಕೆ ಯಾರೋ ಕಸ ಆಯುವವರು ಬೆಂಕಿ ಇಟ್ಟು ಹೋಗಿದ್ದಾರೆ ಅನ್ನೋ ಉತ್ತರವನ್ನ ನೀಡಿದ್ದಾರೆ. ಶ್ರೀದೇವಿ ಆಸ್ಪತ್ರೆಯವರು ಕಟ್ಟಿರೋ ಕಾಗಕ್ಕ, ಗುಬ್ಬಕ್ಕನ ಕತೆಯನ್ನ ನಂಬುತ್ತಾ ಅಥವಾ ಮತ್ತೊಂದು ನೋಟೀಸ್‌ ಕೊಡುತ್ತಾ ಅಂತಾ ಕಾದುನೋಡ್ಬೇಕಿದೆ.

ಇನ್ನು ಈಗ ಆಗಿರೋ ತಪ್ಪಿಗೆ ಏನು ಕ್ರಮ ತೆಗೆದುಕೊಳ್ತೀರಾ ಸರ್‌ ಅಂತಾ ಕೇಳಿದ್ರೆ, ನಾವು ಕ್ರಮ ತೆಗೆದುಕೊಳ್ಳಲ್ಲ, ಡಿಸಿಯವ್ರು ಕ್ರಮ ತೆಗೆದುಕೊಳ್ತಾರೆ ಅಂತಾ ಮತ್ತೆ ಜಿಲ್ಲಾಧಿಕಾರಿ ಕಡೆ ಬೊಟ್ಟು ತೋರಿಸ್ತಿದ್ದಾರೆ. ಜೊತೆಗೆ ಶ್ರೀದೇವಿ ಆಸ್ಪತ್ರೆಯವರು ಮುಂದೆ ಹೀಗಾಗೋದಿಲ್ಲ ಹೇಳಿದ್ದಾರಂತೆ, ಹೀಗಾಗಿ ಇವ್ರು ಸುಮ್ಮನಾಗಿದ್ದಾರಂತೆ. ಅಲ್ಲಿ ಅಷ್ಟು ಅಡಿ ಆಳದವರೆಗೆ ಮೆಡಿಕಲ್‌ ತ್ಯಾಜ್ಯ ಹಾಕಿದ್ರು. ನೀವೇನಾದ್ರೂ ಡಿಗ್‌ ಮಾಡಿ ನೋಡಿದ್ರಾ ಅಂತಾ ಕೇಳಿದ್ರೆ, ನಾವೇನು ಡಿಗ್‌ ಮಾಡಿ ನೋಡಿಲ್ಲ ಅನ್ನೋದು ಡಿಎಚ್‌ಓ ಮಾತು.

ಇನ್ನು ನಾವು ವಾಸ್ತವಾಂಶವನ್ನ ವರದಿ ಮಾಡಿದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಅದರ ವರದಿಯನ್ನ ಕೇಂದ್ರ ಕಚೇರಿಗೆ ನೀಡುವ ಕೆಲಸವನ್ನ ಮಾಡಿದ್ದಾರೆ. ಆದ್ರೆ ಮಾಲಿನ್ಯ ನಿಯಂತ್ರಣ ಮಂಡಳಿಯವರಿಗೂ ಪರಿಸರದ ಮೇಲೆ ಕಾಳಜಿ ಕಮ್ಮಿ ಆದ ಹಾಗಿದೆ. ಹೀಗಾಗಿ ಅಲ್ಲಿಂದಲೂ ಯಾವುದೇ ಕ್ರಮವಾಗಿಲ್ಲ. ಇತ್ತ ಜಿಲ್ಲಾಡಳಿತವಂತೂ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದ್ದು, ಇವ್ರಿಗೆಲ್ಲಾ ತುಮಕೂರು ಜನರ ಮೇಲೆ ಇಷ್ಟೇನಾ ಕಾಳಜಿ ಅನ್ನೋ ಪ್ರಶ್ನೆ ಮೂಡ್ತಿದೆ.

Author:

...
Keerthana J

Copy Editor

prajashakthi tv

share
No Reviews