IPL 2025 : ಇಂದು ಬದ್ದವೈರಿ ಸಿಎಸ್‌ ಕೆ ವಿರುದ್ದ ಸೆಣೆಸಾಡಲಿದೆ ಆರ್‌ ಸಿಬಿ ತಂಡ

IPL 2025 :

ಐಪಿಎಲ್ ​2025 ಪಂದ್ಯಾವಳಿಗಳಲ್ಲಿ ಮೊದಲ ಬಾರಿಗೆ ಬದ್ಧ ವೈರಿಗಳಾದ ಚೆನ್ನೈ ಮತ್ತು ಬೆಂಗಳೂರು, ಇಂದು ಚೆನ್ನೈ ಅಂಗಳದಲ್ಲಿ ಎದುರಾಗಲಿದೆ. ಕಾದಾಟವನ್ನು ಕಣ್ತುಂಬಿಕೊಳ್ಳಲು ಉಭಯ ತಂಡದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ

ಚಿದಂಬರಂ ಮೈದಾನದ ಪಿಚ್ನ್ನು ಹಿಂದಿನ ಪಂದ್ಯಗಳಿಗೆ ಹೋಲಿಸಿ ನೋಡಿದರೆ ಇದು ಬೌಲರ್ ಸ್ನೇಹಿ ಪಿಚ್. ಬೌಲರ್​​ಗಳು ಹೆಚ್ಚು ಮೇಲುಗೈ ಸಾಧಿಸಿದ ಉದಾಹರಣೆಗಳು ಪಿಚ್ನಲ್ಲಿ ಕಂಡು ಬಂದಿವೆ. ಫೇಸರ್​​ಗಳು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಪಿಚ್ ಬ್ಯಾಟರ್ಸ್ಗಳಿಗೂ ಕೂಡ ಅಷ್ಟೇ ಅನುಕೂಲಕರವಾಗಿದೆ. ಅಲ್ದೇ ಸ್ಪಿನ್ನರ್ಗಳು ಕಣಕ್ಕಿಳಿದಾಗ ಮತ್ತು ಎರಡನೇ ಇನ್ನಿಂಗ್ಸ್ ಆಡುವಾಗ ಪಿಚ್​​ ಮೇಲ್ಮೈ ಬದಲಾವಣೆಯಾಗಲಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಎರಡಕ್ಕೂ ಅನುಕೂಲಕರವಾಗುವ ಸಮತೋಲನವನ್ನು ಪಿಚ್ ಹೊಂದಿದೆಚೆನ್ನೈ ಮತ್ತು ಬೆಂಗಳೂರು ತಂಡಗಳ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬ ಆತಂಕವೊಂದು ಕಾಡುತ್ತಿದೆ. ಆದರೆ ತಜ್ಞರು ಹೇಳುವ ಪ್ರಕಾರ ಹವಾಮಾನ ಪಂದ್ಯಕ್ಕೆ ಅನುಕೂಲಕರವಾಗಿಯೇ ಇದೆ. ಕೇವಲ ಶೇಕಡಾ 5 ರಷ್ಟು ಪಂದ್ಯಕ್ಕೆ ಅಡ್ಡಿಯಾಗುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸದ್ಯ ಚೆನ್ನೈನಲ್ಲಿ 28 ಡಿಗ್ರಿ ಸೆಲ್ಸಿಯಸ್ನಿಂದ 32 ಡಿಗ್ರಿಸೆಲ್ಸ್​​ನಷ್ಟು ತಾಪಮಾನವಿದೆ. ಒಂದು ಹವಾಮಾನ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಗಳು ಮಾತ್ರ ಈ ಪಂದ್ಯವನ್ನು ವೀಕ್ಷಿಸಲು ಕಾತುರದಿಂದ ಕಾಯ್ತಾ ಇದಾರೆ.

Author:

share
No Reviews