ಪಾವಗಡ: ಅನುದಾನವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಪಾವಗಡ ಪುರಸಭಾ ಸದಸ್ಯರಿಗೆ ಸೂಚನೆ

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನಾ ಸಭೆ
ತುಮಕೂರು

ಪಾವಗಡ:

ಪಾವಗಡ ಪಟ್ಟಣದ ಪುರಸಭೆ ಕಚೇರಿಯಲ್ಲಿ ರಾಜ್ಯ ಹಣಕಾಸಿನ ಆಯೋಗ ಪುರಸಭಾ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಐದನೇ ಹಣಕಾಸು ಆಯೋಗದ ಸದಸ್ಯರಾದ ಮೊಹಮದ್‌ ಸನಾವುಲ್ಲಾ, ಆರ್‌.ಎಸ್‌.ಪೋಂಡೆ ಸಮಾಲೋಚಕರಾದ ಎಂ. ಕೆ ಕೆಂಪೇಗೌಡ, ಸಿ.ಜಿ ಪ್ರಸನ್ನ, ಅಧ್ಯಕ್ಷರಾದ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿ.ಯೋಗಾನಂದ, ಪುರಸಭಾ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು. ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪಾವಗಡ ಪುರಸಭೆಯ ಅಧ್ಯಕ್ಷರು ಸೇರಿದಂತೆ ಸದಸ್ಯರು ಹಲವು ಬೇಡಿಕೆಗಳನ್ನು ಇಟ್ಟರು.

ಸಭೆಯಲ್ಲಿ ಮಾತನಾಡಿದ  ಐದನೇ ರಾಜ್ಯ ಹಣಕಾಸಿನ ಆಯೋಗದ ಅಧ್ಯಕ್ಷರಾದ ಡಾ.ಸಿ ನಾರಾಯಣ್‌ ಸ್ವಾಮಿ , ಪುರಸಭೆಗೆ ಬಂದಂತಹ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಗೆ ಮುಂದಾಗಬೇಕು ಎಂದರು. ಈಗಾಗಲೇ ಐದನೇ ರಾಜ್ಯ ಹಣಕಾಸು ಆಯೋಗ ಯಾವೆಲ್ಲ ಸಾಧನೆಗಳನ್ನು ಕೈಗೊಂಡಿದೆ ಅನ್ನುವುದರ ಬಗ್ಗೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು ಪ್ರತಿಯೊಬ್ಬರು ಇದನ್ನು ಓದಿ ಅರ್ಥೈಸಿಕೊಳ್ಳಬೇಕೆಂದರು.

ಪುರಸಭಾಧ್ಯಕ್ಷ ಪಿಎಚ್ ರಾಜೇಶ್ ಮಾತನಾಡಿ ಪಾವಗಡ ಪಟ್ಟಣವು ಬಹಳ ಹಿಂದುಳಿದ ಮತ್ತು ಗಡಿನಾಡು ಪ್ರದೇಶವಾಗಿದ್ದು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಸಿಆರ್‌ಎಫ್ ಫಂಡ್ ಮತ್ತು ವಿಶೇಷ ಅನುದಾನ ಬಿಡುಗಡೆಯಾಗಿಲ್ಲ ಆದ್ದರಿಂದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದರು.

ಪುರಸಭಾ ಸದಸ್ಯರಾದ ಸುದೇಶ್ ಬಾಬು ಮಾತನಾಡಿ ಪರಿಸರದ ನಿರ್ವಹಣೆಗಾಗಿ ಹಾಗೂ ನಗರದ ಸ್ವಚ್ಛತೆಯನ್ನು ಕಾಪಾಡುವಂತ ದೃಷ್ಟಿಯಿಂದ ಪರಿಸರ ಅಭಿಯಂತರರು ಅಗತ್ಯವಾಗಿದ್ದಾರೆ ಕೂಡಲೇ ನೇಮಿಸಲು ಕ್ರಮ ವಹಿಸಿ ಎಂದು ವಿನಂತಿಸಿದರು.

Author:

...
Editor

ManyaSoft Admin

Ads in Post
share
No Reviews