ತುಮಕೂರು:
ಸರ್ಕಾರದಿಂದ ಸಿಗಬೇಕಾದ ಮೂಲಸೌಕರ್ಯ ಸಿಗ್ತಾ ಇಲ್ಲ, ಸರ್ಕಾರ ನಮ್ಮನ್ನು ಕಡೆಗಣಗೆ ಮಾಡ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ ವಿಶೇಷಚೇತನರು ಪ್ರತಿಭಟನೆ ನಡೆಸಿದ್ರು. ತುಮಕೂರು ನಗರದ ಡಿಸಿ ಕಚೇರಿ ಮುಂಭಾಗ ತುಮಕೂರು ಜಿಲ್ಲಾ ಅಂಗವಿಕಲರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಸರ್ಕಾರ ನಮ್ಮನ್ನ ಕಡೆಗಣಿಸುತ್ತಿದೆ ,ನಮಗೆ ಅಂಗವಿಕಲತೆ ಇದೆಯೋ ಇಲ್ಲ ಸರ್ಕಾರಕ್ಕೆ ಅಂಗವಿಕಲತೆ ಇದೆಯೋ ಅಂತಾ ಗೊತ್ತಾಗ್ತಾ ಇಲ್ಲ ಎಂದು ಆಕ್ರೋಶ ಹೊರಹಾಕಿದ್ರು. ಪ್ರತಿಭಟನಾನಿರತ ವಿಶೇಷಚೇತರು ಜಿಲ್ಲಾಧಿಕಾರಿ ಮೂಲಕ ತಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಿದ್ರು.
ಇನ್ನು ವಿಶೇಷಚೇತನರಿಗೆ ಬರ್ತಾ ಇರೋ 1400 ಪಿಂಚಣಿ ಸಾಲುತ್ತಿಲ್ಲ, ಹೀಗಾಗಿ ನಮ್ಮ ಪಿಂಚಣಿ ಹಣವನ್ನು 3 ಸಾವಿರಕ್ಕೆ ಹೆಚ್ಚಳ ಮಾಡಿ, ಜೊತೆಗೆ ವಿಶೇಷ ಚೇತನರಿಗೆ ಪ್ರತ್ಯೇಕ ನಿವೇಶನ ನೇಡಬೇಕು ಎಂದು ಪ್ರತಿಭಟನೆ ಮೂಲಕ ಆಗ್ರಹಿಸಿದ್ರು. ಅಲ್ದೇ ನಮಗೆ ವಿತರಿಸಿರೋ ಬಸ್ ಬಸ್‌ನಲ್ಲಿ 300 ಕಿಲೋ ಮೀಟರ್ ವರೆಗೆ ಸಂಚಾರ ಮಾಡಲು ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದ್ರು.
ಪ್ರತಿಭಟನೆ ವೇಳೆ ವಿಶೇಷಚೇತನರು ನಮಗೆ ಸರ್ಕರಿ ಬಸ್‌ಗಳಲ್ಲಿ ಮೀಸಲಿಟ್ಟಿರುವ ಸೀಟುಗಳು ಕೂಡ ನಮಗೆ ಸಿಗ್ತಾ ಇಲ್ಲ… ಸರ್ಕಾರ ನಮ್ಮನ್ನು ಕಡೆಗಣಿಸುವ ಬದಲು ಸ್ವಲ್ಪ ವಿಷ ಕೊಡಿ ಎಂದು ಪ್ರತಿಭಟನಾನಿರತ ವಿಶೇಷಚೇತನರು ಬೇಸರ ವ್ಯಕ್ತಪಡಿಸಿದ್ರು.
ಇನ್ನಾದ್ರು ಅಧಿಕಾರಿಗಳು, ಸರ್ಕಾರ ವಿಶೇಷಚೇತನರ ಬಗ್ಗೆ ಗಮನ ಹರಿಸಿ ಅವರಿಗೆ ಬೇಕಾದ ಸೌಲಭ್ಯವನ್ನು ಪೂರೈಸಿ, ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ.