ಹೆಬ್ಬೂರು :
ಅದ್ಯಾಕೋ ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೆಲವೊಂದು ಗ್ರಾಮಗಳು ಕಣ್ಣಿಗೆ ಕಾಣಿಸಲ್ಲ ಅಂತಾ ಕಾಣುತ್ತೆ.. ಸ್ವತಂತ್ರ ಬಂದು ಇಷ್ಟು ವರ್ಷ ಆದ್ರು ಈವರೆಗೂ ಅದೆಷ್ಟೋ ಗ್ರಾಮಗಳಿಗೆ ಈವರೆಗೂ ಮೂಲಭೂತ ಸೌಕರ್ಯಗಳೇ ಸಿಗ್ತಾ ಇಲ್ಲ. ಕನಿಷ್ಠ ಸೌಕರ್ಯಗಳು ಕೂಡ ಸಿಗದೇ ಜನರು ಪರದಾಡುವಂತಾಗಿದೆ. ಹೌದು ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಅರಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗೊಲ್ಲರಹಟ್ಟಿ ಗ್ರಾಮ ಉದಯವಾಗಿ ನೂರು ವರ್ಷಗಳೇ ಕಳೆದ್ರು ಈವರೆಗೂ ಈ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಕರ್ಯವೇ ಸಿಕ್ಕಿಲ್ಲ.
ಈ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 60 ಕಾಡುಗೊಲ್ಲ ಜನಾಂಗದ ಕುಟುಂಬಗಳು ಇವೆ. ಆದ್ರೆ ಈ ಗ್ರಾಮದ ಜನರು ಈವರೆಗೂ ರಸ್ತೆಯನ್ನೇ ಕಂಡಿಲ್ವಂತೆ. ರಸ್ತೆ ಇಲ್ಲದೇ ಇಲ್ಲಿಗೆ ಬಸ್ಗಳು ಬರದೇ ಸಾರ್ವಜನಿಕರು ನಡೆದುಕೊಂಡೇ ಅಥವಾ ಸ್ವಂತ ಬೈಕ್ಗಳಲ್ಲಿ ಹೋಗಬೇಕಾದ ಸ್ಥಿತಿ ಇದೆ. ರಸ್ತೆ ಸಂಪೂರ್ಣ ಹಳ್ಳಗಳಿಂದ ಕೂಡಿದ್ದು ಓಡಾಡಲು ಕಷ್ಟ ಪಡುವಂತಾಗಿದೆ.
ಇನ್ನು ಈ ಗ್ರಾಮದ ಜನರ ಗೋಳು ಒಂದಾ, ಎರಡಾ..? ರಸ್ತೆ ಸಮಸ್ಯೆ ಒಂದ್ಕಡೆ ಆದ್ರೆ ಗೊಲ್ಲರಹಟ್ಟಿ ಗ್ರಾಮದ ಅಂನವಾಡಿ ಕಟ್ಟಡವನ್ನು ಕೊಡವಿ ಮೂರು ವರ್ಷಗಳೇ ಕಳೆದ್ರು ಈವರೆಗೂ ಅಂಗನವಾಡಿ ಕಟ್ಟಡವನ್ನು ಈವರೆಗೂ ನಿರ್ಮಾಣ ಮಾಡಿಲ್ಲ.. ಇದ್ರಿಂದ ಗರ್ಭಿಣಿಯರು, ಬಾಣಂತಿಯರು ಹಾಗೂ ಶಿಶುವಿಹಾರದ ಮಕ್ಕಳಿಗೆ ಸೌಲಭ್ಯಗಳು ಸಿಗದಂತಾಗಿದೆ. ಇತ್ತ ಗೊಲ್ಲರ ಹಟ್ಟೆ ಶಾಲೆಯ ದುಸ್ಥಿತಿ ಮತ್ತೊಂದು ರೀತಿಯೇ ಇದೆ. ಇರೋ ಒಂದೇ ಕೊಠಡಿಯಲ್ಲಿ ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ಇದ್ದು ಶಿಕ್ಷಣ ಇಲಾಖೆ ಇತ್ತ ಗಮನಹರಿಸದೇ ಇರೋದು ಬೇಸರದ ಸಂತಿಯಾಗಿದೆ.
ಇದಲ್ಲದೇ ಗೊಲ್ಲರಹಟ್ಟಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗಿದೆ, ಆದ್ರೆ ಅದ್ರಿಂದ ಉಪಯೋಗ ಮಾತ್ರ ಗ್ರಾಮದ ಜನರುಗೆ ಸಿಗ್ತಾ ಇಲ್ಲ. ಮನೆ ಮನೆಗಳಲ್ಲಿ ನಲ್ಲಿ ಇದ್ರು ಕೂಡ ಟ್ಯಾಂಕಿನಂದಲೇ ನೀರನ್ನು ಹಿಡಿದುಕೊಂಡು ಬಂದು ಜೀವನ ಸಾಗಿಸುವ ಕೆಟ್ಟ ಸ್ಥಿತಿ ಇದೆ. ಒಟ್ನಲ್ಲಿ ಗೊಲ್ಲರಹಟ್ಟಿ ಗ್ರಾಮ ಸಮಸ್ಯೆಗಳ ಆಗರವಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರೋದು ಮಾತ್ರ ದುರಂತವೇ ಸರಿ.