TIPTUR: ತೋಟಗಾರಿಕೆ ಇಲಾಖೆಯ ಸವಲತ್ತು ಬಳಸಿಕೊಳ್ಳಲು ರೈತರಿಗೆ ಮಾಹಿತಿ

ತಿಪಟೂರು: 

ತಿಪಟೂರು ತಾಲೂಕಿನ ಅನಗೊಂಡನಹಳ್ಳಿ ಗ್ರಾಮದ ಮೋಹನ್ ಎಂಬ ಜಮೀನಿನಲ್ಲಿ ರೈತರಿಗೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಅವರು ಜೇನು ಸಾಕಾಣಿಕೆ ಸೇರಿದಂತೆ ವಿವಿಧ ಮಿಶ್ರ ಬೆಳಗಳ ಕುರಿತಾಗಿ ಮಾಹಿತಿ ನೀಡಿದರು. 

ಇಂದು ವಿಶ್ವ ಭೂಮಿ ದಿನಾಚರಣೆ ಆಚರಿಸುತ್ತಿದ್ದೇವೆ. ಹಾಗೇಯೇ ತಿಪಟೂರಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಬೆಳೆ, ಕೀಟ ನಾಶಕ, ಸಾಗಾಣಿಕೆ ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು.

ಇನ್ನು ಇದೇ ವೇಳೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಮಾತನಾಡಿ,  ಇಂದಿನ  ದಿನಮಾನಗಳಲ್ಲಿ  ಕೊಬ್ಬರಿ  ಬೆಲೆ ಕುಸಿತ ಕಂಡಿದ್ದು ರೈತರು ಕಂಗಲಾಗುವುದು ಬೇಡ.   ಪ್ರಮುಖವಾಗಿ  ತೋಟಗಾರಿಕೆ  ಬೆಳೆಗಳಿಗೆ  ತಗಲಿರುವ  ರೋಗ,  ಕೀಟಗಳ ನಿರ್ವಹಣೆ, ಬೇಸಾಯ ಪದ್ಧತಿ, ಮಿಶ್ರ ಬೆಳೆಯ  ಬಗ್ಗೆ  ಮಾಹಿತಿ  ನೀಡಿ  ತೋಟಗಾರಿಕೆ  ಇಲಾಖೆಯಲ್ಲಿ  ಸಿಗುವಂತ  ಸವಲತ್ತುಗಳ  ಮಾಹಿತಿಯನ್ನು ನೀಡಿದರು. ಆ ಮೂಲಕ ರೈತರಲ್ಲಿ ವ್ಯವಸಾಯ ಜ್ಞಾನಕ್ಕೆ ಮತ್ತಷ್ಟು ಪುಷ್ಠಿ ನೀಡುವ ಕೆಲಸ ಮಾಡಿದರು. 

ಇನ್ನು ಈ ಸಂದರ್ಭದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷಿನ್ ಕಾರ್ಯಕ್ರಮದ ಯೋಜನೆಗಳ ಕುರಿತಾಗಿಯೂ ರೈತರಿಗೆ ಮಾಹಿತಿ ನೀಡಿದರು. ಅಡಿಕೆ ಉತ್ಪನ್ನ, ಅಡಿಕೆ ಸುಲಿಯುವ ಮತ್ತು ಬೇಯಿಸುವ ಮಿಷಿನ್, ಕೃಷಿ ಇಲಾಖೆಯಿಂದ ರೈತರಿಗೆ ನೀಡುತ್ತೇವೆ.   ಸೋಲಾರ್  ಪಂಪಿಗೆ ಸಹಾಯಧನ ನೀಡುವ ವ್ಯವಸ್ಥೇಯನ್ನು ಕೂಡ ಮಾಡ್ತಿವಿ ಅಂತ ಹೇಳಿದರು.

ಈ ಸಂದರ್ಭದಲ್ಲಿ ಸಹಾಯ ತೋಟಗಾರಿಕೆ ಅಧಿಕಾರಿ ಅಜಿತ್ ಕುಮಾರ್, ಕ್ಯಾಡ್ಬರಿ ಕಂಪನಿ ಅಧಿಕಾರಿ ದರ್ಶನ್ ಹಾಗೂ ಸುತ್ತಮುತ್ತಲಿನ ರೈತರು ಹಾಜರಿದ್ದರು.

 

Author:

...
Manjunath

Senior Cameraman

prajashakthi tv

share
No Reviews