India : ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದ BSF ಯೋಧ ಭಾರತಕ್ಕೆ ವಾಪಸ್

BSF ಯೋಧ ಪೂರ್ಣ ಕುಮಾರ್‌ ಶಾ
BSF ಯೋಧ ಪೂರ್ಣ ಕುಮಾರ್‌ ಶಾ
ಅಂತರರಾಷ್ಟ್ರೀಯ

India :

ಆಪರೇಷನ್‌ ಸಿಂಧೂರ ಕಾರ್ಯಚರಣೆ ಬೆನ್ನಲ್ಲೆ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಬಿಎಸ್‌ ಎಫ್‌ ಯೋಧನನ್ನು ಬಂಧಿಸಿದ್ದ ಪಾಕಿಸ್ತಾನ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ. ಏಪ್ರಿಲ್‌ 23ರಂದು ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಆಕಸ್ಮಿಕವಾಗಿ ಫಿರೋಜ್‌ಪುರ ವಲಯದಲ್ಲಿ ಗಡಿ ದಾಟಿದ್ದ ಬಿಎಸ್‌ಎಫ್ 182 ನೇ ಬೆಟಾಲಿಯನ್‌  ಯೋಧ ಪಿ ಕೆ ಶಾನನ್ನು ಬಂಧಿಸಿದ್ದ ಪಾಕ್ ರೇಂಜರ್‌ಗಳು ಇಂದು ಅಟ್ಟಾರಿ ಗಡಿ ಮೂಲಕ ಬಿಡುಗಡೆ ಮಾಡಿದ್ದಾರೆ.

ಇಂದು ಬೆಳಿಗ್ಗೆ ಹತ್ತು ಮೂವತ್ತರ ಸುಮಾರಿಗೆ ಅಟ್ಟಾರಿ ವಾಘಾ ಗಡಿಯಲ್ಲಿ ಪೂರ್ಣ ಕುಮಾರ್‌ ಶಾರನ್ನು ಪಾಕಿಸ್ತಾನಿ ರೇಂಜರ್‌ ಗಳು ಬಿಡುಗಡೆ ಮಾಡಿದ್ದಾರೆ. ಯೋಧನ ಬಿಡುಗಡೆಗಾಗಿ ಭಾರತ ಪಾಕ್‌ ರೇಂಜರ್ ಗಳೊಂದಿಗೆ ನಿರಂತರ ಸಭೆಯನ್ನು ನಡೆಸಲಾಗಿತ್ತು. ಆದರೆ ಎಷ್ಟೇ ಮಾತುಕತೆ ನಡೆಸಿದರೂ ರೇಂಜರ್‌ ಗಳು ಬಿಡಲು ನಿರಾಕರಿಸಿದ್ದರು. ಪ್ರೋಟೋಕಾಲ್ ಪ್ರಕಾರ ಭಾರತೀಯ ಸೇನೆಗೆ ಹಸ್ತಾಂತರ ಮಾಡಿದ್ದು, ಪಿ.ಕೆ. ಶಾ ಅವರು ಸದ್ಯ ಸೇನಾ ಕಣ್ಗಾವಲಿನಲ್ಲಿದ್ದಾರೆ. ಭಾರತೀಯ ಯೋಧ ವೈರಿ ರಾಷ್ಟ್ರದಿಂದ ಸುರಕ್ಷಿತವಾಗಿ ಬಿಡುಗಡೆಯಾಗಿರೋದು ಹೆಮ್ಮೆಯ ವಿಚಾರವಾಗಿದೆ.

Author:

...
Sushmitha N

Copy Editor

prajashakthi tv

share
No Reviews