India : ಭಾರತ ಪಾಕ್‌ ಗಡಿಯಲ್ಲಿನ ನಾಲ್ಕು ರಾಜ್ಯಗಳಲ್ಲಿ ನಾಳೆ ಮಾಕ್‌ ಡ್ರಿಲ್‌

ನವದೆಹಲಿ: ದೇಶದ ಪಶ್ಚಿಮ ಗಡಿಯಲ್ಲಿ ಸುರಕ್ಷತೆ ಬಿಗಿಗೊಳಿಸಲು ಹಾಗೂ ಯುದ್ಧ ಸಂದರ್ಭದ ತುರ್ತು ಪರಿಸ್ಥಿತಿಗಳಿಗೆ ಸಜ್ಜಾಗುವ ಉದ್ದೇಶದಿಂದ, ನಾಳೆ ಪಾಕಿಸ್ತಾನ ಗಡಿಯಲ್ಲಿ ಇರುವ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಮಾಕ್‌ ಡ್ರಿಲ್‌ ನಡೆಯಲಿದೆ. ಗುಜರಾತ್‌, ಪಂಜಾಬ್‌, ರಾಜಸ್ಥಾನ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಈ ಡ್ರಿಲ್‌ ಏಕಕಾಲದಲ್ಲಿ ನಡೆಯಲಿದ್ದು, ನಾಗರಿಕರಲ್ಲಿ ಯುದ್ಧ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭ್ಯಾಸದ ಮುಖ್ಯ ಉದ್ದೇಶವಾಗಿದೆ.

ಈ ಮಾಕ್‌ ಡ್ರಿಲ್‌ನಲ್ಲಿ ಭದ್ರತಾ ಪಡೆಗಳು, ರಾಜ್ಯಾಡಳಿತ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಮತ್ತು ಸ್ಥಳೀಯ ಆಡಳಿತ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದು, ಯುದ್ದದ ಸಂದರ್ಭದಲ್ಲಿ ಜನಸಾಮಾನ್ಯರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ಅಭ್ಯಾಸ ನೀಡಲಾಗುತ್ತದೆ.

ಹಠಾತ್ ಪರಿಸ್ಥಿತಿಗಳ ಸಂದರ್ಭದಲ್ಲಿ ಸುರಕ್ಷಿತ ಸ್ಥಳಾಂತರ, ಆಹಾರ ಮತ್ತು ಔಷಧಿ ವಿತರಣೆ, ಸಂವಹನ ವ್ಯವಸ್ಥೆ ನಿರ್ವಹಣೆ, ಮತ್ತು ಆಮ್ಲಜನಕ ಸೇವೆಗಳ ಲಭ್ಯತೆ ಕುರಿತ ಅಭ್ಯಾಸಗಳು ಮುಖ್ಯ ಆಕರ್ಷಣೆಯಾಗಲಿವೆ. ಈ ಡ್ರಿಲ್ ಸಂದರ್ಭದಲ್ಲಿ ಕೆಲ ಪ್ರದೇಶಗಳಲ್ಲಿ ಸಂಚಾರ ನಿರ್ಬಂಧ, ಸೈರನ್‌ ಧ್ವನಿ, ಮತ್ತು ಸೇನೆ ಸಂಚಲನವಾಗಲಿದ್ದು, ಜನತೆ ಪ್ಯಾನಿಕ್ ಆಗದೇ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews