ಟ್ಯಾಕ್ಸ್‌ ವಿಷಯದಲ್ಲಿ ಭಾರತ - ಚೀನಾ ಎರಡೂ ಒಂದೇ ಎಂದ ಅಮೆರಿಕ!

ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್
ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್
ಅಂತರರಾಷ್ಟ್ರೀಯ

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಕ್ಕೆ ಬಂದ ಮೇಲೆ ಹೊಸ ಮಾದರಿಯ ಆರ್ಥಿಕ ನೀತಿಯನ್ನು ಜಾರಿ ಮಾಡುತ್ತಿದ್ದಾರೆ. ಭಾರತ ಹಾಗೂ ಅಮೆರಿಕಾ ನಡುವೆ ಸಂಬಂಧ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಭಾರತದ ಮೇಲೆ ದೊಡ್ಡ ಮಟ್ಟದ ಟ್ಯಾಕ್‌ ಹಾಕುವುದಿಲ್ಲ ಎಂದೇ ನಿರೀಕ್ಷೆ ಮಾಡಿತ್ತು. ಆದರೆ ಭಾರತದ ಲೆಕ್ಕಾಚಾರಗಳು ತಲೆಕೆಳಗಾಗಿವೆ ನಾವು ತೆರಿಗೆ ವಿಚಾರದಲ್ಲಿ ಎಲ್ಲಾ ದೇಶಗಳನ್ನು ಸಮಾನವಾಗಿ ಕಾಣುತ್ತೇವೆ ಎಂದು ಡೊನಾಡ್ಡ್‌ ಟ್ರಂಪ್‌ ಹೇಳಿದ್ದಾರೆ. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ಟ್ರಂಪ್ಅವರು ಟ್ಯಾಕ್ಸ್ವಾರ್ ಶುರು ಮಾಡಿದ್ದು. ವಿವಿಧ ದೇಶಗಳ ಮೇಲೆ ಟ್ಯಾಕ್ಸ್ಹಾಕುತ್ತಿದ್ದಾರೆ. ವಿಪರೀತ ಟ್ಯಾಕ್ಸ್ನಿಂದಾಗಿ ವಿವಿಧ ದೇಶಗಳು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿವೆ. ಕೆನಡಾ, ಮೆಕ್ಸಿಕೋ ಹಾಗೂ ಚೀನಾದ ಮೇಲೆ ಈಗಾಗಲೇ ವಿಪರೀತ ಟ್ಯಾಕ್ಸ್ಹಾಕಲಾಗಿದೆ. ಆದರೆ, ಇದೀಗ ಡೊನಾಲ್ಡ್ಟ್ರಂಪ್ ಸರ್ಕಾರದ ಕಣ್ಣು ಭಾರತದ ಮೇಲೆಯೂ ಬಿದ್ದಿದೆ. ಭಾರತ ಹಾಗೂ ಚೀನಾಗೆ ಸಮಾನವಾಗಿ ಟ್ಯಾಕ್ಸ್ಹಾಕುವುದಾಗಿ ಡೊನಾಲ್ಡ್ಟ್ರಂಪ್ಅವರು ಹೇಳಿರುವುದು ಆಘಾತಕ್ಕೆ ಕಾರಣವಾಗಿದೆ.

ಯಾವುದೇ ಕಾರಣಕ್ಕೂ ಭಾರತಕ್ಕೆ ಟ್ಯಾಕ್ಸ್ವಿನಾಯಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ಟ್ರಂಪ್ ಅವರು ಹೇಳಿದ್ದಾರೆ. ಅಲ್ಲದೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಹೇಳಿದ್ದಾರೆ. ಇನ್ನು ಭಾರತದ ಸರಾಸರಿ ಟ್ಯಾಕ್ಸ್ಸುಮಾರು 17% ರಷ್ಟಿವೆ. ಇದನ್ನು ಇತ್ತೀಚಿನ ದಿನಗಳಲ್ಲಿ ಕ್ರಮೇಣ ಕಡಿಮೆ ಮಾಡಲಾಗಿದೆ. ಇನ್ನು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ವಿಸ್ಕಿ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆ ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ.







 

Author:

...
Editor

ManyaSoft Admin

Ads in Post
share
No Reviews