TUMAKURU: ತುಮಕೂರಿನಲ್ಲಿ ಇಫ್ತಿಯಾರ್‌ ಸಂಭ್ರಮ... ಮಸೀದಿಯಲ್ಲಿ ಬಿರಿಯಾನಿ ಸವಿದ ಮುಸ್ಲಿಂ ಬಾಂಧವರು

ಇಫ್ತಿಯಾರ್‌ ಕೂಟ
ಇಫ್ತಿಯಾರ್‌ ಕೂಟ
ತುಮಕೂರು

ತುಮಕೂರು: 

ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್‌ ಮಾಸ ಬಂತೆಂದರೆ  ಸಂಭ್ರಮ, ಸಡಗರ ಜೊತೆಗೆ ಅತ್ಯಂತ ಭಕ್ತಿ ಭಾವದಿಂದ ಉಪವಾಸ ಆಚರಿಸುತ್ತಾರೆ. ಇನ್ನು ರಂಜಾನ್‌ ಮಾಸದ ಅಂಗವಾಗಿ ಇಫ್ತಿಯಾರ್‌ ಕೂಟವನ್ನು ಆಯೋಜನೆ ಮಾಡುವುದು ವಾಡಿಕೆಯಾಗಿದ್ದು, ಸಂಜೆ ಉಪವಾಸ ಬಿಡುವ ವೇಳೆ ಕೆಲವು ಮುಸ್ಲಿಂ ಬಾಂಧವರು ಒಟ್ಟಿಗೆ ಒಂದೆಡೆ ನಮಾಜ್‌ ಮಾಡಿ, ಉಪವಾಸ ಬಿಟ್ಟು ಬಿರಿಯಾನಿ ಸವಿಯುವುದು ಮೊದಲಿನಿಂದಲೂ ಬೆಳೆದುಕೊಂಡ ಬಂದ ಸಂಪ್ರದಾಯವಾಗಿದೆ. ಅದರಂತೆ ಇಂದು ತುಮಕೂರಿನ ಗುಂಚಿ ಸರ್ಕಲ್‌ನಲ್ಲಿರುವ ಮಸೀದಿಯಲ್ಲಿ ಇಫ್ತಿಯಾರ್‌ ಕೂಟವನ್ನು ಆಯೋಜನೆ ಮಾಡಲಾಗಿದ್ದು, ಮುಸ್ಲಿಂ ಬಾಂಧವರಲ್ಲದೇ, ಬೇರೆ ಧರ್ಮದವರು ಕೂಡ ಈ ಇಫ್ತಿಯಾರ್‌ ಕೂಟದಲ್ಲಿ ಭಾಗಿಯಾಗಿ ಹಣ್ಣು- ಹಂಪಲು, ಸಮೋಸ, ಸಿಹಿ ತಿನಿಸು ಸವಿದು ಖುಷಿ ಪಟ್ಟರು.

ಇನ್ನು ಗುಂಜಿ ಸರ್ಕಲ್‌ನಲ್ಲಿರೋ ಮಸೀದಿಯಲ್ಲಿ ಆಯೋಜಿಸಿದ್ದ ಇಫ್ತಿಯಾರ್‌ ಕೂಟದಲ್ಲಿ ASP ಅಬ್ದುಲ್‌ ಖಾದರ್‌, ಡಿವೈಎಸ್‌ಪಿಗಳಾದ ಚಂದ್ರಶೇಖರ್‌, ದಿನೇಶ್‌ ಸೇರಿ  ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ರು. ಸಂಜೆ ಉಪವಾಸ ಬಿಡುವ ವೇಳೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ್ರು. ಇಫ್ತಿಯಾರ್‌ ಅಂಗವಾಗಿ ನಾನಾ ಬಗೆಯ ಹಣ್ಣುಗಳು, ಮಿಟ್ಟ, ಬಿರಿಯಾನಿ, ಕಬಾಬ್‌ ಸೇರಿ ನಾನಾ ಬಗೆಯ ಪದಾರ್ಥಗಳನ್ನು ತಯಾರಿಸಿದ್ದು, ಔತಣಕೂಟದಲ್ಲಿ ಒಟ್ಟಿಗೆ ಬೋಜನ ಸವಿದರು. 

Author:

share
No Reviews