ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ಕ್ರಿಕೆಟ್
Champions Trophy 2025 :
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಶುರುವಾಗಿದೆ. ಮಹತ್ವದ ಟೂರ್ನಿಗೆ ಎಲ್ಲಾ ರೀತಿಯ ತಯಾರಿ ನಡೆದಿದೆ. ಜತೆಗೆ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡಗಳು ಪ್ರಕಟವಾಗುತ್ತಿವೆ.
ಈಗಾಗಲೇ ಇಂಗ್ಲೆಂಡ್ ತಂಡ ಕೂಡ ಪ್ರಕಟ ಆಗಿದೆ. ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ಲೀಡ್ ಮಾಡಲಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಯ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರೋ ಬೆನ್ ಸ್ಟೋಕ್ಸ್ಗೆ ರೆಸ್ಟ್ ನೀಡಲಾಗಿದೆ.
ಮಾರ್ಕ್ ವುಡ್ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿರೋ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಅವರಿಗೆ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್ ಅವರನ್ನು ಆರ್ಸಿಬಿ ಭಾರೀ ಮೊತ್ತ ನೀಡಿ ಖರೀದಿ ಮಾಡಿದೆ. ಈಗ ಫಿಲ್ ಸಾಲ್ಟ್ ಚಾಂಪಿಯನ್ಸ್ ಟ್ರೋಫಿ ಆಡೋದು ಡೌಟ್ ಎಂದು ತಿಳಿದು ಬಂದಿದೆ. ಇದಕ್ಕೆ ಕಾರಣ ಇವರು ಕ್ರಿಕೆಟ್ ಪ್ರಾಕ್ಟೀಸ್ ಮಾಡುವಾಗ ಇಂಜುರಿಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಇದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್ ತಂಡಗಳು ಭರ್ಜರಿ ತಯಾರಿ ಆರಂಭಿಸಿವೆ. ಈಗಾಗಲೇ ಮೆಗಾ ಟೂರ್ನಿಗೆ ಡೇಟ್ ಅನೌನ್ಸ್ ಆಗಿದ್ದು, ಸಂಪೂರ್ಣ ವೇಳಾಪಟ್ಟಿ ರಿಲೀಸ್ ಆಗಬೇಕಿದೆ. ಇದರ ಮಧ್ಯೆ ಆರ್ಸಿಬಿಗೆ ಫಿಲ್ ಸಾಲ್ಟ್ ಅಲಭ್ಯತೆ ತಲೆನೋವಾಗಿದೆ. ಇವರು ಐಪಿಎಲ್ ಶುರು ಆಗೋವಷ್ಟರಲ್ಲಿ ಫಿಟ್ ಆಗದಿದ್ರೆ ಫಿಲ್ ಸಾಲ್ಟ್ ಜಾಗಕ್ಕೆ ಮಯಾಂಕ್ ಅಗರ್ವಾಲ್ ಬರಬಹುದು. ಆರ್ಸಿಬಿಗೆ ಈಗ ಒಳ್ಳೆಯ ಓಪನರ್ ಬೇಕಾಗಿರುವುದು ಮುಖ್ಯವಾಗಿದೆ.