IPL 2025 : ಈ ಸಲ ಆರ್‌ಸಿಬಿ ಕಪ್‌ ಗೆಲ್ಲದಿದ್ರೆ ಪತಿಗೆ ಡಿವೋರ್ಸ್‌ | ಅಭಿಮಾನಿಯ ಪೋಸ್ಟರ್‌ ವೈರಲ್‌

CRICKET : ಚಂಡೀಗಢದ ಮುಲ್ಲನಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕೇವಲ 101 ರನ್‌ಗಳಿಗೆ ಆಲೌಟ್ ಆಗಿ ಒತ್ತಡದಲ್ಲಿತ್ತು.

ಆರ್ಸಿಬಿಯ ಆಟಗಾರರು ಆರಂಭದಿಂದಲೇ ಬೌಲರ್‌ಗಳನ್ನು ದವಡೆಯುತ್ತಾ, ಕೇವಲ 10 ಓವರ್ಗಳಲ್ಲೇ 102 ರನ್ ಬಾರಿಸಿ, 2 ವಿಕೆಟ್ ನಷ್ಟಕ್ಕೆ ಫೈನಲ್ ಪ್ರವೇಶಿಸಿದರು.

ಈ ನಡುವೆ ಮಹಿಳಾ ಅಭಿಮಾನಿಯೊಬ್ಬರು ವಿಚ್ಛೇದನದ ಕುರಿತು ವಿಶೇಷ ಭಿತ್ತಿಪತ್ರ ಪ್ರದರ್ಶಿಸಿರುವುದು ಗಮನಸೆಳೆದಿದೆ. ಹೌದು. 17 ಆವೃತ್ತಿ ಕಳೆದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್‌ಸಿಬಿಗೆ ಅಭಿಮಾನಿಗಳ ಕೊರತೆಯಂತೂ ಆಗಿಲ್ಲ. ಆದರೀಗ ತಂಡ ಫೈನಲ್‌ಗೆ ತಲುಪಿದ್ದು, ಈ ಸಲವೂ ಟ್ರೋಫಿ ಗೆಲ್ಲದಿದ್ದರೆ ಪತಿಗೆ ವಿಚ್ಛೇದನ (Devorce) ನೀಡುವುದಾಗಿ ಮಹಿಳೆಯೊಬ್ಬರು ಸ್ಟೇಡಿಯಂನಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಿರುವುದು ಕಂಡುಬಂದಿದೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

Author:

...
Keerthana J

Copy Editor

prajashakthi tv

share
No Reviews