SIRA: ರಾಗಿ ಕೇಂದ್ರದಲ್ಲಿ ಅಧಿಕಾರಿಗಳಿಂದ ರೈತರಿಗೆ ಭಾರೀ ಅನ್ಯಾಯ

ಶಿರಾ: 

ರೈತರಿಂದ ನೇರವಾಗಿ ರಾಗಿ ಖರೀದಿಸಲು ತುಮಕೂರು ಜಿಲ್ಲೆ ಸೇರಿ ತಾಲೂಕು ಮಟ್ಟದಲ್ಲಿ ಸರ್ಕಾರದ ವತಿಯಿಂದ ರಾಗಿ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರ ನಿಗದಿತ ಬೆಲೆಗೆ ನಿಗದಿ ಮಾಡಿ ರೈತರಿಂದ ನೇರವಾಗಿ ರಾಗಿಯನ್ನು ಕೊಂಡುಕೊಳ್ಳುತ್ತಿದೆ. ಆದ್ರೆ ರಾಗಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ ಆಗ್ತಿದೆ ಅನ್ನೋ ಆರೋಪವನ್ನು ಮಾಡಲಾಗ್ತಿದೆ.

ಶಿರಾ ನಗರದಲ್ಲಿ ಸ್ಥಾಪಿಸಿರೋ ರಾಗಿ ಕೇಂದ್ರದಲ್ಲಿ ರೈತರ ಮೇಲೆ ದೌರ್ಜನ್ಯ ಎಸಗುತ್ತಿರೋದು ಬಯಲಾಗಿದೆ. ರೈತರಿಗೆ ನ್ಯಾಯಯುತವಾಗಿ ಬೆಲೆ ಕೊಡದೇ ದಬ್ಬಾಳಿಕೆ ಮಾಡ್ತಾ ಇದ್ದು, ದಬ್ಬಾಳಿಕೆಯ ವಿಡಿಯೋ ಪ್ರಜಾಶಕ್ತಿ ಟಿವಿಗೆ ಸಿಕ್ಕಿದೆ.  50 ಕೆ.ಜಿ ತೂಕದ ರಾಗಿಗೆ ಒಂದೂವರೆ ಕೆಜಿ ಹೆಚ್ಚುವರಿಯಾಗಿ ತೂಗುತ್ತಿದ್ದು, ಒಂದು ಕ್ವಿಂಟಾಲ್‌ ರಾಗಿಗೆ 3 ಕೆಜಿ ರಾಗಿಯನ್ನು ಹೆಚ್ಚುವರಿಯಾಗಿ ತೂಗುತ್ತಿದ್ದಾರೆ. ಅಲ್ದೇ ಹಮಾಲಿ ಚಾರ್ಜ್‌ ಎಂದು 50 ಕೆಜಿಯ ರಾಗಿಯ ಚೀಲಕ್ಕೆ 20 ರೂಪಾಯಿ ವಿಧಿಸುತ್ತಿದ್ದಾರೆ. ಇದ್ರಿಂದ ರೈತನ ಒಂದು ಕ್ವಿಂಟಾಲ್‌ ರಾಗಿಯಿಂದ ಒಟ್ಟು 150 ರೂಪಾಯಿಯನ್ನು ರಾಗಿ ಕೇಂದ್ರ ಅಧಿಕಾರಿಗಳು ಹೊಡೆಯುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಇನ್ನು ರಾಗಿ ಬೆಳೆಗಾರರು ದೂರದ ಊರಿನಿಂದ ಗಾಡಿಗಳನ್ನು ಮಾಡಿಕೊಂಡು ಬಂದು ರಾಗಿಯನ್ನು ಮಾರಾಟ ಮಾಡ್ತಾರೆ.. ರಾಗಿ ಮಾರಾಟ ಮಾಡಿದ ಕೂಡಲೇ ರಾಗಿ ಹಣವನ್ನು ಕೊಡೊದಿಲ್ಲ ಬದಲಾಗಿ ಮತ್ತೊಂದು ದಿನ ಬರುವಂತೆ ಸೂಚನೆ ಮಾಡ್ತಾರೆ.. ಇಲ್ಲಿಗೆ ಬಂದು ಹೋಗಲು ಪೆಟ್ರೋಲ್‌ ಚಾರ್ಜ್‌ ಜೊತೆಗೆ ಕ್ವಿಂಟಾಲ್‌ ರಾಗಿಯ ಮೇಲೂ ಹಣವನ್ನು ಹೊಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ.

ಅದೇನೆ ಆಗಲಿ ರೈತರು ಕಷ್ಟಪಟ್ಟು, ಬೆವರು ಸುರಿಸಿ ರಾಗಿ ಬೆಳೆಯನ್ನು ಬೆಳೆದು ಮಾರಾಟ ಮಾಡಲು ಬಂದ್ರೆ ಈ ರೀತಿ ಅನ್ಯಾಯ ಮಾಡಿದ್ರೆ, ಆ ರೈತ ಎಲ್ಲಿ ಹೋಗಬೇಕು.. ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿರೋ ರೈತನಿಗೆ ಈ ರೀತಿ ಅನ್ಯಾಯ ಮಾಡಿದ್ರೆ, ಆ ರೈತ ಕುಟುಂಬ ಹೇಗೆ ಜೀವನ ಸಾಗಿಸಬೇಕು. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ರಾಗಿ ಬೆಳೆಗಾರರಿಗೆ ಆಗ್ತಿರೋ ಅನ್ಯಾಯವನ್ನು ಸರಿಪಡಿಸಬೇಕಿದೆ.

 

Author:

...
Sub Editor

ManyaSoft Admin

Ads in Post
share
No Reviews