ಹುಬ್ಬಳ್ಳಿ: ಬಡ್ಡಿ ಸಾಲದ ಕಿರುಕುಳ | ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ..!

ಮೃತ ವ್ಯಕ್ತಿ ಶಿವಾನಂದ ಬಸವಣ್ಣಪ್ಪ ಕಳ್ಳಿಮನಿ (36)
ಮೃತ ವ್ಯಕ್ತಿ ಶಿವಾನಂದ ಬಸವಣ್ಣಪ್ಪ ಕಳ್ಳಿಮನಿ (36)
ಧಾರವಾಡ/ ಹುಬ್ಬಳ್ಳಿ

ಹುಬ್ಬಳ್ಳಿ:

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳದ ಜೊತೆಗೆ ಬಡ್ಡಿ ಸಾಲ ನೀಡುವವರ ಹಾವಳಿಯೂ ಹೆಚ್ಚಾಗಿದೆ. ಇದೀಗ ಸಾಲ ಕೊಟ್ಟವನ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಜೀವಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ಬುಧವಾರ ನಡೆದಿದೆ.

ಹುಬ್ಬಳ್ಳಿಯ ಯಲಿವಾಳ ಗ್ರಾಮದ ನಿವಾಸಿ ಶಿವಾನಂದ ಬಸವಣ್ಣಪ್ಪ ಕಳ್ಳಿಮನಿ (36) ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ. ಇವರು ಕಾರ್ತಿಕ್‌ ಬಳ್ಳಾರಿ ಎಂಬುವವರ ಬಳಿ 4 ಲಕ್ಷ ರೂಪಾಯಿ ಸಾಲ ಪಡೆದಿದ್ದರೂ ಬಳಿಕ ಅಸಲು ಬಡ್ಡಿ ಸಮೇತ 4 ಲಕ್ಷ ರೂ ಸಾಲ ತೀರಿಸಿದ್ದರೂ ಸಹ ಸಾಲಗಾರರ ಕಿರುಕುಳ ತಾಳಲಾರದೇ ಉಣಕಲ್‌ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಗುತ್ತಲದಲ್ಲಿ ಮೃತನ ಬೈಕ್‌ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಮುನ್ನ ಡೆತ್‌ ನೋಟ್‌ ಬರೆದಿಟ್ಟು ಸಾವಿಗೀಡಾಗಿದ್ದಾರೆ.

ಸದ್ಯ ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಶವಾಗಾರಕ್ಕೆರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಹುಬ್ಬಳ್ಳಿ-ಧಾರವಾಡ ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಈ ಬಗ್ಗೆ ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದ್ದಾರೆ

Author:

...
Editor

ManyaSoft Admin

Ads in Post
share
No Reviews