KITCHEN TIPS: ಪೆಪ್ಪರ್ ಚಿಕನ್ ಕಬಾಬ್ ಮಾಡುವ ವಿಧಾನ

KITCHEN TIPS: 

ಪೆಪ್ಪರ್ ಚಿಕನ್ ಕಬಾಬ್

ಬೇಕಾಗುವ ಸಾಮಗ್ರಿಗಳು 

  1. ಚಿಕನ್ (Bone-less chicken)500 ಗ್ರಾಂ
  2. ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ
  3. ನಿಂಬೆ ರಸ – 1 ಚಮಚ
  4. ಮೆಣಸು ಪುಡಿ  – 1.5 ಚಮಚ
  5. ಗರಂ ಮಸಾಲಾ – 1/2 ಚಮಚ
  6. ಹಸಿಮೆಣಸು ಪೇಸ್ಟ್– 1 ಚಮಚ
  7. ಮೊಸರು – 3 ಚಮಚ
  8. ಉಪ್ಪು – ರುಚಿಗೆ ತಕ್ಕಷ್ಟು
  9. ಕೊತ್ತಂಬರಿ ಸೊಪ್ಪು 

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಚಿಕನ್  ಹಾಕಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಮೆಣಸು ಪುಡಿ, ಗರಂ ಮಸಾಲಾ, ಹಸಿಮೆಣಸು ಪೇಸ್ಟ್, ಮೊಸರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.  ಚೆನ್ನಾಗಿ ಮಿಕ್ಸ್ ಮಾಡಿ ಮತ್ತು ಕನಿಷ್ಠ 1 ಗಂಟೆ ಫ್ರಿಜ್‌ನಲ್ಲಿ ಮೆರಿನೇಟ್ ಮಾಡಿ. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ. ಕಾದ ನಂತರ ಮಸಾಲೆ ಮಿಶ್ರಿತ ಚಿಕನ್ ನ್ನು ಒಂದೊಂದೇ ಹಾಕಿ 4-5 ನಿಮಿಷ ಬೇಯಿಸಿ, ತೆಗೆಯಿರಿ. 10 ನಿಮಿಷದ ಬಳಿ ಮತ್ತೆ ಕಾದ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಪೆಪ್ಪರ್ ಚಿಕನ್ ಕಬಾಬ್ ಸವಿಯಲು ಸಿದ್ಧ.

 

 

Author:

...
Keerthana J

Copy Editor

prajashakthi tv

share
No Reviews