ಯುಗಾದಿ ಹಬ್ಬಕ್ಕೆ ಗಸೆ ಗಸೆ ಹೋಳಿಗೆ ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಯುಗಾದಿ ಹಬ್ಬವೆಂದರೆ ಅಲ್ಲಿ ಸಿಹಿಯದ್ದೇ ಸಂಭ್ರಮ ಸಿಹಿ ಇಲ್ಲದೆ ಯಾವ ಹಬ್ಬವೂ ಪೂರ್ಣ ಆಗುವುದೇ ಇಲ್ಲ. ಅದರಲ್ಲೂ ಯುಗಾದಿಯಂತು ಹಿಂದೂಗಳ ಪಾಲಿಗೆ ಬಹಳ ಮುಖ್ಯವಾದ ಹಾಗೆ ಅತ್ಯಂತ ಸಂಭ್ರಮದ ಹಬ್ಬವಾಗಿರಲಿದೆ. ಯುಗಾದಿ ಅಂದರೆ ಅಲ್ಲಿ ಹೋಳಿಗೆ ಇರಲೇಬೇಕು. ಅದರಲ್ಲಿ ಗಸೆಗಸೆ ಹೋಳಿಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ 

ಗಸೆಗಸೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು...

  • ಗಸಗಸೆ-1 ಬಟ್ಟಲು
  • ಒಣ ಕೊಬ್ಬರಿ ತುರಿ- 1 ಬಟ್ಟಲು
  • ಬೆಲ್ಲ-3/4 ಬಟ್ಟಲು
  • ಎಲಕ್ಕಿ ಪುಡಿ-ಸ್ವಲ್ಪ
  • ಪೇಣಿ ರವೆ- 1/2 ಬಟ್ಟಲು
  • ಗೋಧಿಹಿಟ್ಟು-1/2 ಬಟ್ಟಲು
  • ಉಪ್ಪು- ಚಿಟಿಕೆ
  • ಅರಿಶಿನ-ಸ್ವಲ್ಪ
  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು    

ಹೋಳಿಗೆ ಮಾಡುವ ವಿಧಾನ :

ಗಸಗಸೆ, ಕೊಬ್ಬರಿ ತುರಿ ಎರಡನ್ನು ನುಣ್ಣಗೆ ಪುಡಿ ಮಾಡಿಕೊಂಡು, ದಪ್ಪ ತಳದ ಪಾತ್ರ‍್ರೆಗೆ ಹಾಕಿ ಬೆಲ್ಲ ಎಲ್ಲಕ್ಕಿ ಪುಡಿ ಹಾಕಿ ನೀರು ಎರಡು ಚಮಚ ಹಾಕಿ ಒಲೆಯ ಮೇಲೆ ಇಟ್ಟು ಮಗುಚಿ ಗಟ್ಟಿಯಾದ ನಂತರ ಇಳಿಸಿ ಹೂರಣ ರೆಡಿ. ಪೇಣಿರವೆ, ಗೋಧಿ ಹಿಟ್ಟು, ಸ್ವಲ್ಪ ಉಪ್ಪು, ಅರಿಶಿನ ಹಾಕಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನಂತೆ ಕಲೆಸಿ ಮೂರು ಚಮಚ ಎಣ್ಣೆಹಾಕಿ ನಾದಿ ಎರಡು ಗಂಟೆಕಾಲ ನೆನೆಯಲು ಬಿಡಿ. ಕಣಕವನ್ನು ಕೈಯಲ್ಲಿ ತೆಗೆದುಕೊಂಡು ಅಗಲ ಮಾಡಿ ಹೂರಣದ ಉಂಡೆ ಇಟ್ಟು ಮುಚ್ಚಿ ಹೋಳಿಗೆ ಶೀಟಿಗೆ ಎಣ್ಣೆ ಹಚ್ಚಿಕೊಂಡು ತುಂಬಿದ ಉಂಡೆ ಇಟ್ಟು ಲಟ್ಟಿಸಿ ಕಾದ ತವಾದ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿದರೆ ರುಚಿಕರವಾದ ಗಸಗಸೆ ಹೋಳಿಗೆ ಸವಿಯಲು ಸಿದ್ಧ.

 

Author:

...
Editor

ManyaSoft Admin

share
No Reviews