KITCHEN TIPS:
ಸ್ಪೆಷಲ್ಲಾಗಿ ಮನೆಯಲ್ಲೇ ಮಾಡಿಕೊಳ್ಳಿ ಮಾವಿನಕಾಯಿ ಪುಳಿಯೊಗರೆ
ಬೇಕಾಗುವ ಸಾಮಗ್ರಿಗಳು:
ಮಾವಿನಕಾಯಿ – 1
ಎಣ್ಣೆ – 2 ಚಮಚ
ಸಾಸಿವೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೆಬೇಳೆ – 1 ಚಮಚ
ಕರಿಬೇವು – ಸ್ವಲ್ಪ
ಇಂಗು – ಸ್ವಲ್ಪ
ಜೀರಿಗೆ - ಸ್ವಲ್ಪ
ಬೆಲ್ಲ - ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ತುಪ್ಪ – 2 ಚಮಚ
ಮಾಡುವ ವಿಧಾನ:
ಮಾವಿನಕಾಯಿಯನ್ನು ತೊಳೆದು, ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬೆಚ್ಚಗಾದ ಮೇಲೆ, ಸಾಸಿವೆ ಹಾಕಿ ಸಿಡಿಸಿ. ನಂತರ ಕಡಲೇಬೇಳೆ, ಉದ್ದಿನಬೇಳೆ ಹಾಕಿ ಹುರಿದುಕೊಳ್ಳಿ. ನಂತರ ಕರಿಬೇವು ಎಲೆ ಮತ್ತು ಸ್ವಲ್ಪ ಹಿಂಗು ಹಾಕಿ. ಬಳಿಕ ಮಾವಿನಕಾಯಿ ತುರಿ ಅಥವಾ ಪೇಸ್ಟ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಬೆಲ್ಲ ಮತ್ತು ಉಪ್ಪು ತುಪ್ಪ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ರುಚಿಕರವಾದ ಮಾವಿನಕಾಯಿ ಪುಳಿಯೊಗರೆ ರೆಡಿ.