ಪಾವಗಡ : ಅಂಗನವಾಡಿ ಕೇಂದ್ರದಲ್ಲಿ ಕೊಡೊ ಪೌಷ್ಠಿಕ ಆಹಾರ ಎಷ್ಟು ಸುರಕ್ಷಿತ..?

ಪಾವಗಡ :

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಕೊಡುವ ಆಹಾರದಲ್ಲಿ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಆಗಾಗ್ಗೆ ಕೇಳಿ ಬಂದಿದ್ದು, ಈಗ ಅದಕ್ಕೆ ಪುಷ್ಠಿ ನೀಡುವಂತೆ, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೆಲವು ಅಂಗನವಾಡಿ ಕೇಂದ್ರದ ಆಹಾರದಲ್ಲಿ ಹುಳ ಕಂಡು ಬಂದಿತ್ತು ಎಂಬ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.  ಪಾವಗಡ ಅಂಗನವಾಡಿ ಕೇಂದ್ರದಲ್ಲೊಂದು ನೀಡಲಾಗಿರೋ ಪೌಷ್ಠಿಕ ಆಹಾರದಲ್ಲಿ ಹುಳು ಪತ್ತೆಯಾಗಿದೆ.

ಪಾವಗಡ ಪಟ್ಟಣದ ಶಿರಾ ರಸ್ತೆಯಲ್ಲಿರೋ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಗೆಂದು ಮಿಲೆಟ್‌ ಲಡ್ಡು ಪಾಕೇಟ್‌ಅನ್ನು ನೀಡಲಾಗಿತ್ತು. ಮನೆಗೆ ಪೌಷ್ಠಿಕ ಆಹಾರವನ್ನು ತೆಗೆದುಕೊಂಡು ಹೋದ ಬಾಣಂತಿ, ಮಿಲೆಟ್‌ ಲಡ್ಡು ಪಾಕೇಟ್‌ಅನ್ನು ಓಪನ್‌ ಮಾಡ್ತಿದ್ದಂತೆ ಅದರಲ್ಲಿ ಹುಳು ಇರೋದು ಕಂಡು ಬಂದಿದೆ. ಹುಳುವನ್ನು ನೋಡಿದ ಬಾಣಂತಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಇನ್ನು ಅಂಗನವಾಡಿ ಪೌಷ್ಠಿಕ ಆಹಾರದ ಗುಣಮಟ್ಟದ ಬಗ್ಗೆ ಹಲವು ಬಾರಿ ಪ್ರಜಾಶಕ್ತಿ ವರದಿ ಮಾಡಿದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಲಾಗುತ್ತಿದೆ. ಪಾವಗಡ ಪಟ್ಟಣದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿದ್ದರು ಅಧಿಕಾರಿಗಳು ಗಮನ ಹರಿಸದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಡ್ತಾ ಇದೆ. ಅಲ್ಲದೇ ತಾಲೂಕಿನ ಬಹುತೇಕ ಪ್ರಕರಣಗಳಾದರೂ ಕೂಡ  ಡಿಡಿ ಯಾವುದೇ ಅಂಗನವಾಡಿ ಕೇಂದ್ರದಲ್ಲಿ ಭೇಟಿ ನೀಡದೆ ಕಾರ್ಯಕರ್ತೆಯರ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. 

Author:

share
No Reviews