ಬೆಂಗಳೂರು: ನಾಳೆಯಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ

ಬೆಂಗಳೂರು: 

ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ. ಧರ್ಮರಾಯ ದೇವಸ್ಥಾನದಲ್ಲಿ ಏ.14ರ ವರೆಗೂ ಕರಗ ಉತ್ಸವ ನಡೆಯಲಿದೆ. ನಾಳೆ ರಾತ್ರಿ 10 ಗಂಟೆಗೆ ಕರಗ ಆಚರಣೆಗಳು ಶುರುವಾಗಲಿದ್ದು, ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಅವರು ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರರವರು ಕರಗ ಹೊರುತ್ತಿದ್ದಾರೆ.  ಬಾರಿಯ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ.

ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆಯಿಂದಲೇ ದೇವಾಲಯದ ಸ್ವಚ್ಛತಾ ಕಾರ್ಯ ನಡೆದಿದೆ. ಸಿಬ್ಬಂದಿಯು ದೇವಾಲಯ, ರಥ ಸೇರಿದಂತೆ ಸಂಪೂರ್ಣ ಶುಚಿಗೊಳಿಸುತ್ತಿದ್ದಾರೆ. ಕರಗ ಆಚರಣೆಗಳು ನಾಳೆ ರಾತ್ರಿ 10 ಗಂಟೆಗೆ ಶುರುವಾಗಲಿವೆ. ಹೀಗಾಗಿ ರಸ್ತೆ ತುಂಬೆಲ್ಲಾ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

Author:

...
Sub Editor

ManyaSoft Admin

share
No Reviews