Healthy Tips : ಸದಾ ಆರೋಗ್ಯದಿಂದಿರಲು ಈ ಫಿಟ್‌ನೆಸ್ ವಿಧಾನಗಳನ್ನು ಪ್ರತಿದಿನ ಅನುಸರಿಸಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

Healthy tips: 

ಆರೋಗ್ಯದಿಂದ ಇರುವುದು ಮತ್ತು ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಇತ್ತೀಚಿನ ಜೀವನದಲ್ಲಿ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿದೆ. ಮನೆಯಲ್ಲಿ ಮಾಡಿದ ಆಹಾರ ಸೇವಿಸುವುದು, ಉತ್ತಮ ನಿದ್ರೆ, ವ್ಯಾಯಾಮ ಇದರ ಹೊರತಾಗಿಯೂ ಕೆಲವು ವಿಧಾನಗಳನ್ನು ಜೀವನದಲ್ಲಿ ಅನುಸರಿಸಿದರೆ ಸದಾ ಫಿಟ್ ಆಗಿರಬಹುದು. ಈ ವಿಧಾನಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸದಾ ಆರೋಗ್ಯವಾಗಿರಲು ಈ ಫಿಟ್‌ನೆಸ್ ಸಲಹೆಗಳನ್ನು ಅನುಸರಿಸಿ : 

1. ಬೆಳಿಗ್ಗೆ ನೀರು ಕುಡಿಯುವುದು :
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ದೊಡ್ಡ ಲೋಟದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಇಡೀ ರಾತ್ರಿ ಮಲಗಿ ಏಳುವಾಗ ದೇಹ, ಡಿಹೈಡ್ರೇಟ್ ಆಗಿರುತ್ತದೆ. ಈ ಕಾರಣದಿಂದ ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಇಷ್ಟು ಮಾತ್ರವಲ್ಲ ಬೆಳಗ್ಗೆದ್ದು ನೀರು ಕುಡಿಯುವುದು ಮೆದುಳು ಮತ್ತು ಮೂತ್ರಪಿಂಡಗಳಿಗೂ ತುಂಬಾ ಒಳ್ಳೆಯದು. 

2. ಪ್ರೋಟೀನ್ ಯುಕ್ತ ಉಪಹಾರ :
ಉತ್ತಮ ಪ್ರೋಟೀನ್ ಹೊಂದಿರುವ ಆಹಾರವನ್ನು ಬೆಳಗಿನ ಉಪಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ (sugar level) ನಿಯಂತ್ರಿಸಲ್ಪಡುತ್ತದೆ. ದೇಹಕ್ಕೆ ಎನರ್ಜಿ ಸಿಗುತ್ತದೆ. ಹಾಗೂ ಹಸಿವಿನ ಅನುಭವವಾಗುವುದಿಲ್ಲ. ಪ್ರೋಟೀನ್ ತುಂಬಿದ ಉಪಹಾರ ತೂಕ ಇಳಿಸಲು ಕೂಡಾ ಉತ್ತಮವೆಂದು ಸಹ ಹೇಳಲಾಗುತ್ತದೆ.

3. ದಿನಕ್ಕೆ ಒಂದು ಹಣ್ಣು ಸೇವನೆ :

ಒಂದು ಹಣ್ಣು ಅಥವಾ ಯಾವುದೇ ಹಸಿರು ತರಕಾರಿಗಳನ್ನು ಪ್ರತೀ ದಿನ ಸೇವಿಸಬೇಕು. ಪ್ರತಿದಿನ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಫೈಬರ್, ವಿಟಮಿನ್, ಮಿನರಲ್ ಗಳು ಸಿಗುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಚರ್ಮದ ರೋಗಕ್ಕೂ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಮುಖ್ಯವಾಗಿರುತ್ತದೆ.

4. ಮೆಟ್ಟಿಲುಗಳನ್ನು ಹತ್ತುವುದು:
ಅಧ್ಯಯನದ ಪ್ರಕಾರ, 60 ಮೆಟ್ಟಿಲುಗಳನ್ನು 20 ಸೆಕೆಂಡುಗಳಲ್ಲಿ ದಿನಕ್ಕೆ ಮೂರು ಬಾರಿ ಹತ್ತುವುದು ಕಾರ್ಡಿಯೋ ಫಿಟ್ನೆಸ್ ಅನ್ನು 5 ಪ್ರತಿಶತ ಹೆಚ್ಚಿಸುತ್ತದೆ. ಕಾರ್ಡಿಯೋ ರೆಸ್ಪಿರೇಟರಿ ಫಿಟ್‌ನೆಸ್‌ನಲ್ಲಿ ಸ್ವಲ್ಪ ಸುಧಾರಣೆಯಾದರೂ ಕೂಡಾ ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಹತ್ತುವುದು ಇಳಿಯುವುದು ಆರಂಭಿಸಿದರೆ ಆರೋಗ್ಯಕ್ಕೆ ಒಳ್ಳೆಯದು. 

5. ಗ್ರೀನ್ ಟೀ ಕುಡಿಯಿರಿ :
ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಗ್ರೀನ್ ಟೀಯನ್ನು ವಾರಕ್ಕೆ ಮೂರು ಬಾರಿಯಾದರೂ ಕುಡಿಯುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು. ಆದ್ದರಿಂದ, ನೀವು ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಗ್ರೀನ್ ಟೀ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

Author:

...
Editor

ManyaSoft Admin

Ads in Post
share
No Reviews