ಕೂದಲಿನ ಬೆಳವಣಿಗೆಗಾಗಿ ಅನೇಕರು ಪಾರ್ಲರ್ಗಳಿಗೆ ತೆರಳುತ್ತಾರೆ. ಬ್ಯೂಟಿ ಸೆಲೂನ್‌ಗಳಲ್ಲಿ ಟ್ರೀಟ್‌ಮೆಂಟ್‌ಗಳನ್ನು ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಟ್ರೈ ಮಾಡುತ್ತಾರೆ. ಆದರೆ ನಮ್ಮ ಮನೆಗಳಲ್ಲಿಯೇ ಇರುವಂತಹ ಪದಾರ್ಥಗಳು ಕೂದಲಿಗೆ ಒಳ್ಳೆಯ ಪೋಷಣೆ ನೀಡುತ್ತವೆ. ಕೂದಲು ಉದ್ದನೆ ಬೆಳೆಯಬೇಕಾದರೆ ನೀವು ನಿಮ್ಮ ದಿನನಿತ್ಯದ ಕೂದಲ ಆರೈಕೆಯಲ್ಲಿ ಈ ಟಿಪ್ಸ್ ಅನುಸರಿಸಿ.
ಕೂದಲು ಬೆಳವಣಿಗೆಗೆ ಮನೆಮದ್ದು:
೩ ಚಮಚ ಮೆಂತ್ಯ ಕಾಳನ್ನು ತೊಳೆದುಕೊಳ್ಳಿ. ನಂತರ ಒಂದು ಗ್ಲಾಸ್ ನೀರು ಹಾಕಿ ಮೆಂತ್ಯಕಾಳನ್ನು ರಾತ್ರಿ ಪೂರ್ತಿ ನೆನೆಯಲು ಬಿಡಿ. ನೆನೆದ ದಾಸವಾಳ ಹೂವು ಅಥವಾ ದಾಸವಾಳ ಎಲೆಗಳು, ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಪೇಸ್ಟನ್ನು ಒಂದು ಬಟ್ಟಲಿಗೆ ಹಾಕಿ ಅರ್ಧ ಹೋಳು ನಿಂಬೆಹಣ್ಣಿನ ರಸ ಹಾಕಿ ಮಿಶ್ರಣ ಮಾಡಿ. ನಿಮ್ಮ ತಲೆ ಬುರುಡೆಗೆ ಮತ್ತು ಕೂದಲಿಗೆ ಪೇಸ್ಟನ್ನು ಹಚ್ಚಿ ೩ ಗಂಟೆಗಳ ಕಾಲ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ.
ಇದರಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲು ವೇಗವಾಗಿ ಬೆಳೆಯುತ್ತದೆ. ಒಟ್ಟು ಕಡಿಮೆಯಾಗುತ್ತದೆ. ವಾರಕ್ಕೆ ಎರಡು ಬಾರಿ ಕೂದಲಿಗೆ ಈ ಪೇಸ್ಟ್‌ನ್ನು ಹಚ್ಚಿಕೊಳ್ಳಿ.