ಮೆಂತ್ಯ ಕಾಳು, ಮೆಂತ್ಯ ಸೊಪ್ಪು ಕೇವಲ ಒಂದು ತರಕಾರಿ ಮಾತ್ರವಲ್ಲ. ಔಷಧಿಯುಕ್ತ ಆಹಾರವೂ ಹೌದು. ಇನ್ನು ಮೆಂತ್ಯ ಕಾಳುಗಳಿಂದ ನಮ್ಮ ಆರೋಗ್ಯವನ್ನು ಬಹುತೇಕವಾಗಿ ಸುಧಾರಿಸಿಕೊಳ್ಳಬಹುದು. ಮೆಂತ್ಯ ಕಾಳು ಅನೇಕ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಇದು ಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅನೇಕ ಆರೋಗ್ಯ ತೊಂದರೆಗಳಿಂದ ಪಾರು ಮಾಡುತ್ತದೆ. ಇದರಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ ಎ, ಬಿ, ಡಿ, ಜೀವಸತ್ವಗಳು, ಫೈಬರ್, ಕಬ್ಬಿಣದ ಅಂಶಗಳು ಹೇರಳವಾಗಿರುತ್ತದೆ.
೧ ಚಮಚ ಮೆಂತ್ಯ ಕಾಳಯಗಳನ್ನು ನೆನೆಹಾಕಿ ನೀರನ್ನ ಸೇವಿಸೋದ್ರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಬ್ಯಾಡ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳಬಹುದು. ಜೀರ್ಣಶಕ್ತಿ ಸಕ್ರಿಯವಾಗಿ ಮಾಡುತ್ತದೆ. ಕೀಳು ನೋವುಗಳನ್ನು ಕೂಡ ಕಡಿಮೆ ಮಾಡುತ್ತದೆ.
ನೆನೆಸಿಟ್ಟು ಮೆಂತ್ಯಕಾಳುಗಳನ್ನ ಸೇವಿಸೋದ್ರಿಂದ ತೂಕವನ್ನು ಕಡಿಮೆ ಮಾಡಬಹುದು. ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಮೂರು ಬಾರಿ ಸೇವಿಸಬೇಕು.
ಮೆಂತ್ಯ ಕಾಳುಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಇದು ಸಾಂಪ್ರದಾಯಿಕವಾಗಿ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಅಜೀರ್ಣ, ವಾಯುವಿನಂತಹ ಅಪಾಯಗಳನ್ನು ನಿವಾರಿಸುತ್ತದೆ.
ಮೆಂತ್ಯ ಕಾಳುಗಳು ಅತ್ಯಾಧಿಕತೆಯನ್ನು ಉತ್ತೇಜಿಸುವ ಮೂಲಕ ಹಸಿವನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮ ತೂಕವನ್ನು ಇಳಿಸುತ್ತದೆ ಎಂದು ನಂಬಲಾಗಿದೆ. ಇದು ಅತ್ಯುತ್ತಮವಾದ ಜೀರ್ಣಕ್ರಿಯೆ ಸುಧಾರಿಸುವ ಔಷಧಿಯಾಗಿದ್ದು, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದರ ಪರಿಣಾಮ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಮೆಂತ್ಯ ಕಾಳು ಹೊಟ್ಟೆ ತುಂಬಿಸುವ ಗುಣವನ್ನು ಹೊಂದಿದ್ದು, ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆ ಮಾಡುವುದನ್ನು ತಗ್ಗಿಸುತ್ತದೆ. ಹಸಿವನ್ನು ನಿಯಂತ್ರಿಸುವ ಮೂಲಕ ಸ್ಥೂಲಕಾಯ ಮತ್ತು ಬೊಜ್ಜನ್ನು ಕರಗಿಸುತ್ತದೆ.