Health Tips : ಮಕ್ಕಳಿಗೆ ಈ ಆಹಾರ ನೀಡಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

Health Tips For Kids : 

ಮಕ್ಕಳ ಬೆಳವಣಿಗೆಗೆ ಪೂರಕವಾದ ಆಹಾರದ ಬಗ್ಗೆ ಕೆಲವು ಪೋಷಕರಿಗೆ ಗೊಂದಲ ಇರುತ್ತದೆ. ಮಕ್ಕಳು ಒಂದು ಹಂತದವರೆಗೂ ಬೆಳೆಯುವವರೆಗೂ ಅವರ ಮೇಲೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿರುತ್ತೆ. ಅದರಲ್ಲೂ ಆಹಾರದ ವಿಚಾರದಲ್ಲಿ ಅವರ ಮೇಲೆ ಹೆಚ್ಚು ನಿಗಾ ಇಡಬೇಕಾಗುತ್ತದೆ. ಮಕ್ಕಳ ಬೆಳವಣಿಗೆಗೆ ಸಹಾಯವಾಗುವಂತಹ ಆಹಾರ ನೀಡುವುದು ಅತೀ ಮುಖ್ಯ. ಹಾಗೆ ಅವರ ಕಲಿಕೆ ಕೂಡ ಮನೆಯಿಂದ ಆರಂಭವಾಗುತ್ತದೆ.ಮಕ್ಕಳು ಬುದ್ದಿವಂತರಾಗಬೇಕಾದರೆ ಬಹಳ ಮುಖ್ಯ ಎನಿಸುವುದು ಆಹಾರ.

ಮೆದುಳಿನ ಕಾರ್ಯಕ್ಷಮತೆ ಹೆಚ್ಚು ಮಾಡುವಂತಹ ಆಹಾರಗಳು ಕೂಡ ಇದೆ. ಚಿಕ್ಕಮಕ್ಕಳಿಗೆ ಯಾವ ರೀತಿಯ ಆಹಾರ ನೀಡುತ್ತೇವೋ ಅದರ ಮೇಲೆ ಅವರ ಬುದ್ಧಿವಂತಿಕೆ ಮಟ್ಟ ನಿರ್ಧಾರವಾಗುತ್ತೆ. ಮಗುವಿನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಹಾಗೂ ಬುದ್ಧಿಶಕ್ತಿಯ ಅಭಿವೃದ್ಧಿಯೂ ಕೂಡ ಮುಖ್ಯ.

ಮಗುವಿನ ಸ್ಮರಣ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಪೋಷಕಾಂಶಯುಕ್ತ ಆಹಾರವು ಸಹಾಯ ಮಾಡುತ್ತದೆ. ಹಾಗಾದ್ರೆ ಮಕ್ಕಳ ಬುದ್ದಿಶಕ್ತಿ ಬೆಳವಣಿಗೆಗೆ ನಾವು ನಿತ್ಯ ಯಾವ ರೀತಿಯ ಆಹಾರ ನೀಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
 

ಮಕ್ಕಳ ಬುದ್ದಿಶಕ್ತಿ ಹೆಚ್ಚುವಂತೆ ಮಾಡುವ ಆಹಾರಗಳಲ್ಲಿ ಈ ಒಮೆಗಾ-3 ಫುಡ್ಸ್ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಒಮೆಗಾ 3 ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು ನಮ್ಮ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ. ಮಗು ಚಟುವಟಿಕೆಯಿಂದ ಕೂಡಿದಷ್ಟು ಅದರ ಬುದ್ದಿಶಕ್ತಿ ಬೆಳವಣಿಗೆ ಆಗುತ್ತಾ ಹೋಗುತ್ತದೆ.

ವಾಲ್ ನಟ್ಸ್, ಅಗಸೆ ಬೀಜ, ಆಲಿವ್ ಆಯಿಲ್ ಚಿಯಾ ಬೀಜ, ಮೊಟ್ಟೆ, ಮೀನು ಹಲವು ಬಗೆ ಸೊಪ್ಪು, ತರಕಾರಿಗಳಲ್ಲಿ ಒಮೆಗಾ 3 ಕೊಬ್ಬು ಹೆಚ್ಚಾಗಿರುತ್ತದೆ. ಹಾಗೆ ಡ್ರೈ ಫ್ರೂಟ್ಸ್‌ಗಳಲ್ಲೂ ಈ ಒಮೆಗಾ3 ಕೊಬ್ಬಿನಾಂಶ ಸಿಗಲಿದೆ. ಒಮೆಗಾ 3 ಮಾತ್ರೆಗಳು ಕೂಡ ಮೀನಿನ ಎಣ್ಣೆಯಿಂದ ಮಾಡಲಾಗಿರುತ್ತದೆ.

ಮೊಸರು

ಮಕ್ಕಳಿಗೆ ಮೊಸರನ್ನು ಹೆಚ್ಚು ನೀಡುವುದು ಉತ್ತಮ. ಇದು ಪ್ರೋ ಬಯೋಟಿಕ್ ಆಗಿದ್ದು ಕರುಳಿಗೆ ಬೇಕಾದ ಅತ್ಯುತ್ತಮ ಬ್ಯಾಕ್ಟೀರಿಯಾವನ್ನು ಮೊಸರು ಸೃಷ್ಟಿಸಲಿದೆ. ಹೀಗಾಗಿ ಮೊಸರು ಅಗತ್ಯವಾಗಿ ಬೇಕಾಗುತ್ತದೆ. ಬ್ರೈನ್‌ಗೆ ಬೇಕಾದ ನ್ಯೂರೋ ಟ್ರಾನ್ಸ್‌ಮೀಟರ್‌ಗಳು ಹೊಟ್ಟೆಯಲ್ಲಿಬೆಳವಣಿಗೆಯಾಗುತ್ತದೆ ಹೀಗಾಗಿ ಮೊಸರು ಮಕ್ಕಳ ಬುದ್ಧಿಮಟ್ಟದಲ್ಲಿ ಸುಧಾರಣೆಯಾಗಲು ಸಹಕಾರಿಯಾಗಿದೆ

ರೆಡ್ ರೈಸ್‌

ಮಕ್ಕಳಿಗೆ ಬ್ರೌನ್ ರೈಸ್ ಅಥವಾ ರೆಡ್ ರೈಸ್‌ ಬಹಳ ಉತ್ತಮ. ಬಿಳಿಯಾದ ರೈಸ್‌ಗಿಂತಲೂ ಈ ಬ್ರೌನ್‌ ರೈಸ್‌ ಅವರಿಗೆ ನೀಡುವುದು ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಬುದ್ದಿ ಚುರುಕಾಗಿಸಲು ಇದು ಸಹಕಾರಿಯಾಗಿದೆ.

ಮೊಳಕೆ ಕಾಳು

ಮೊಳಕೆ ಕಾಳಿನಲ್ಲಿ ಅತೀ ಹೆಚ್ಚು ಫೈಬರ್, ಪ್ರೋಟೀನ್ ಸಿಗುವುದರಿಂದ ಸಂಜೆ ಅಥವಾ ಬೆಳಗ್ಗೆ ಈ ಮೊಳಕೆ ಕಾಳು ನೀಡುವುದರಿಂದ ಅವರ ಬುದ್ದಿ ಶಕ್ತಿಯ ಮಟ್ಟ ಸಮತೋಲನದಿಂದ ಕೂಡಿರುತ್ತದೆ. ಹಾಗೆ ಮೊಳಕೆ ಕಾಳಿನ ಪಲ್ಯ, ಸಾರು, ಹಸಿಯಾಗಿ ನೀಡುವುದು, ಜ್ಯೂಸ್ ರೀತಿ ನೀಡುವ ಮೂಲಕ ಅವರಿಗೆ ನೀಡಬಹುದು.

ಧಾನ್ಯಗಳ ಆಹಾರ

ಇಡೀ ಧಾನ್ಯಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆ ಧಾನ್ಯಗಳಿಂದ ಮಾಡಿರುವಂತಹ ಬ್ರೆಡ್, ಪಾಸ್ತಾ, ಸೀರಲ್, ಅಕ್ಕಿ, ಜೋಳ, ಕ್ವಿನೋವಾ, ಓಟ್ಸ್ ಮತ್ತು ಬಾರ್ಲಿ ಒಳ್ಳೆಯದು. ಈ ಆಹಾರಗಳು ಮಕ್ಕಳ ಬೆಳವಣಿಗೆಯಲ್ಲಿ ನೆರವಾಗುವುದು ಮತ್ತು ಶಕ್ತಿ ನೀಡುವುದು. ಧಾನ್ಯಗಳಿಂದ ತಯಾರಿಸಿದ ಆಹಾರದಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದೆ. ಅದೇ ಇಡೀ ಧಾನ್ಯಗಳಿಂದ ಮಾಡಿರುವಂತಹ ಆಹಾರ ಗಳಾಗಿರುವಂತ ಪಾಸ್ತಾ ಮತ್ತು ಬ್ರೆಡ್ ಮಕ್ಕಳಿಗೆ ದೀರ್ಘಕಾಲ ತನಕ ಶಕ್ತಿ ನೀಡುವುದು ಮತ್ತು ದೀರ್ಘಾವಧಿಗೆ ಹೊಟ್ಟೆ ತುಂಬಿರುವಂತೆ ಮಾಡುವುದು.

ಹಣ್ಣು ಮತ್ತು ತರಕಾರಿಗಳು

ಹೆಚ್ಚಾಗಿ ಮಕ್ಕಳು ತರಕಾರಿ ಎಂದರೆ ಸ್ವಲ್ಪ ದೂರ ಹೋಗುವರು. ಆದರೆ ಹಣ್ಣು ಮತ್ತು ತರಕಾರಿಗಳು ಮಕ್ಕಳ ಬೆಳವಣಿಗೆಗೆ ಪೂರಕ. ಹಣ್ಣು ಮತ್ತು ತರಕಾರಿಗಳಲ್ಲಿ ಮಕ್ಕಳಿಗೆ ಶಕ್ತಿ, ವಿಟಮಿನ್, ಆಂಟಿಆಕ್ಸಿಡೆಂಟ್, ನಾರಿನಾಂಶ ಮತ್ತು ನೀರಿನಾಂಶವು ಲಭ್ಯವಾಗುವುದು. ವಯಸ್ಸಾದ ವೇಳೆ ಕಾಡುವಂತಹ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್ ನ್ನು ಇದು ತಡೆಯುವುದು. ನೀವು ತರಕಾರಿಗಳಿಂದ ವಿವಿಧ ಖಾದ್ಯಗಳನ್ನು ಮಾಡಿಕೊಳ್ಳಬಹುದು. ಬಣ್ಣ ಬಣ್ಣದ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ಸಲಾಡ್ ತಯಾರಿಸಿ ಮಕ್ಕಳಿಗೆ ನೀಡಿ.
 

ನೀರು
12 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀರು ಅತ್ಯುತ್ತಮ ಆರೋಗ್ಯಕಾರಿ ಪಾನೀಯ. ಇದು ತುಂಬಾ ಅಗ್ಗವಾಗಿ ಸಿಗುವುದು ಮತ್ತು ಇದು ಆರೋಗ್ಯಕ್ಕೂ ಒಳ್ಳೆಯದು.​​​​​​​
 

Author:

...
Editor

ManyaSoft Admin

Ads in Post
share
No Reviews