Health Tips:
ಪಪ್ಪಾಯಿ ಸಿಹಿಯಾದ ರುಚಿಯನ್ನು ಹೊಂದಿದೆ. ಇದರಲ್ಲೂ ಪೌಷ್ಟಿಕಾಂಶ ಸೇರಿದೆ. ಆರೋಗ್ಯ ದೃಷ್ಠಿಯಿಂದ ಬೆಳಗ್ಗಿನ ಜಾವ ಇದನ್ನು ಸೇವಿಸಿದರೆ ಕ್ಯಾಲ್ಸಿಯಂ ಅಂಶ ದೇಹ ಸೇರುತ್ತದೆ. ಇವೀಷ್ಟು ಮಾತ್ರವಲ್ಲ ಪಪ್ಪಾಯಿಯಿಂದ ಫೈಬರ್, ಮೆಗ್ನೀಷಿಯಂ, ಪೊಟ್ಯಾಸಿಯಂ ಸಿಗುತ್ತದೆ. ಪಪ್ಪಾಯಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಇ ಒಳಗೊಂಡಿದೆ. ಹಾಗಾಗಿ ಬಹುತೇಕರಿಗೆ ಈ ವಿಚಾರ ತಿಳಿದಿಲ್ಲ, ಇಷ್ಟೇಲ್ಲಾ ಪ್ರಯೋಜನವಿರುವ ಹಣ್ಣನ್ನು ಮಕ್ಕಳಿಗೆ ನೀಡಿದರೆ ಅವರ ಅರೋಗ್ಯ ಉತ್ತಮವಾಗಿರುತ್ತದೆ.
ಜೀರ್ಣ ಶಕ್ತಿ ಹೆಚ್ಚಿಸುತ್ತದೆ :
ಪರಂಗಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಜೀರ್ಣತೆ ಸಮಸ್ಯೆ ದೂರವಾಗುತ್ತದೆ. ಪರಂಗಿ ಹಣ್ಣಿನ ಪ್ರಭಾವದಿಂದ ದೇಹದ ಜೀರ್ಣಶಕ್ತಿ ವೃದ್ಧಿಸುತ್ತದೆ. ಇಷ್ಟೇ ಅಲ್ಲದೆ ನಮ್ಮ ದೇಹ ನಾವು ತಿನ್ನುವ ಆಹಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಂಸ್ಕರಿಸಲು ನೆರವಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ :
ತೂಕ ಇಳಿಸಲು ಪ್ರಯತ್ನ ಪಟ್ಟು ಸೋತವರಿಗೆ ದಿನನಿತ್ಯ ಪಪ್ಪಾಯಿ ಹಣ್ಣು ಸೇವಿಸಿ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಔಷಧಿ ಸೇವಿಸಿ ತೂಕ ಇಳಿಸುವ ಬದಲು ಖಾಲಿ ಹೊಟ್ಟೆಗೆ ಪಪ್ಪಾಯಿ ಸೇವಿಸಿ ಆರೋಗ್ಯದ ಜೊತೆಗೆ ತೂಕವನ್ನು ಕಡಿಮೆ ಮಾಡಬಹುದು.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ :
ಚರ್ಮದ ಆರೋಗ್ಯವನ್ನು ಕಾಪಾಡಲು ಪರದಾಡುವವರು ಪಪ್ಪಾಯಿ ಟ್ರೈ ಮಾಡಿದರೆ ಒಳ್ಳೆಯದು. ಯಾಕಂದರೆ ಮಿಟಮಿನ್ ಸಿ ಇರುವ ಕಾರಣ ಚರ್ಮದ ಕೋಶವನ್ನು ಸರಿಪಡಿಸುತ್ತದೆ. ಮತ್ತು ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.