HEALTH TIPS: ಕರ್ಬೂಜ ಜ್ಯೂಸ್​ ಕುಡಿಯುವುದರಿಂದ ಆರೋಗ್ಯಕ್ಕಾಗುವ ಉಪಯೋಗಗಳು

ಬೇಸಿಗೆಯ ಸಮಯದಲ್ಲಿ ಹೆಚ್ಚಾಗಿ ಕಂಡು ಬಂದು ಹಲವರ ಬಾಯಲ್ಲಿ ನೀರೂರಿಸುವಂತಹ ಕರಬೂಜ ಹಣ್ಣು, ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಮನುಷ್ಯನಿಗೆ ತಂದು ಕೊಡುತ್ತದೆ. ಕರಬೂಜ ಹಣ್ಣಿನಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆಹಾರ ಸೇವನೆಗಳ ಮಧ್ಯೆ ಹಸಿವೆಯಿಂದ ಬಳಲುವವರು ಕರ್ಬುಜ ಹಣ್ಣು ಸೇವನೆ ಮಾಡಬಹುದು. ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಇದರಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣದಿಂದ ನಮ್ಮ ದೇಹದ ಕ್ಯಾಲೋರಿಗಳನ್ನು ಹತೋಟಿಯಲ್ಲಿರುವಂತೆ ಮಾಡುತ್ತದೆ.

*ದೇಹದ ಶಕ್ತಿ ಹೆಚ್ಚಿಸುತ್ತೆ

ಕರ್ಬೂಜ ಹಣ್ಣು ತಂಪು ಗುಣವನ್ನು ಹೊಂದಿದೆ. ಇದಕ್ಕೆ ಪಿತ್ತ ಮತ್ತು ವಾತವನ್ನು ನಿಯಂತ್ರಿಸುವ ಸಾಮರ್ಥ್ಯವಿದೆ. ಇವಿಷ್ಟು ಮಾತ್ರವಲ್ಲ, ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥವನ್ನು ಈ ಹಣ್ಣು ಹೊಂದಿದೆ.

*ಮಲಬದ್ಧತೆಯನ್ನು ದೂರ ಮಾಡುತ್ತದೆ

ದೇಹದಲ್ಲಿ ನಾರಿನ ಅಂಶದ ಕೊರತೆ ಉಂಟಾದಾಗ ಸಹಜವಾಗಿಯೇ ಮನುಷ್ಯನಿಗೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ಆದರೆ ಕರ್ಬುಜ ಹಣ್ಣಿನ ಸೇವನೆಯಿಂದ ಅದರಲ್ಲಿರುವ ಯಥೇಚ್ಛವಾದ ನಾರಿನ ಅಂಶಗಳು ನೈಸರ್ಗಿಕ ವಿರೇಚಕಗಳಾಗಿ ಕೆಲಸ ಮಾಡಿ ದೇಹಕ್ಕೆ ಅಗತ್ಯ ಪ್ರಮಾಣದ ನಾರಿನ ಅಂಶಗಳನ್ನು ಒದಗಿಸುವುದರ ಜೊತೆಗೆ ಮಲಬದ್ಧತೆಯ ಗುಣ ಲಕ್ಷಣಗಳನ್ನು ಮಾಯವಾಗಿಸುತ್ತದೆ.

*ರಕ್ತದೊತ್ತಡ ನಿಯಂತ್ರಿಸುತ್ತದೆ

ಹೃದಯ ಸಂಬಂಧ ಕಾಯಿಲೆಯನ್ನು ನಿಯಂತ್ರಿಸುವ ಗುಣ, ಅಧಿಕ ರಕ್ತದೊತ್ತಡ ನಿಯಂತ್ರಿಸುವ ಶಕ್ತಿ ಹಾಗೂ ಉರಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಕರ್ಬೂಜ ಜ್ಯೂಸ್​ ಮಾಡಿ ಸೇವಿಸಿದರೆ ಉತ್ತಮ.

*ಕರ್ಬೂಜ ಹಣ್ಣಿನಲ್ಲಿ ಕ್ಯಾನ್ಸರ್ ವಿರೋಧಿ ಗುಣ ಲಕ್ಷಣಗಳಿವೆ

ಕರ್ಬೂಜ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ flavonoid ಗಳಾದ  ಲ್ಯೂಟೀನ್ ಮತ್ತು ಎಂಬ ಅಂಶಗಳಿವೆ. ಇವು ಮನುಷ್ಯನ ದೇಹದಲ್ಲಿ ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಏಜೆಂಟ್ ಗಳಾಗಿ ಕೆಲಸ ಮಾಡುತ್ತವೆ. ಈ ಆಂಟಿ - ಆಕ್ಸಿಡೆಂಟ್ ಗಳು ದೇಹದ ಕೋಶಗಳನ್ನು ಮತ್ತು ಇತರ ಅಂಗ ರಚನೆಗಳನ್ನು ರಕ್ಷಿಸಿ ಫ್ರೀ ರಾಡಿಕಲ್ ಗಳ ಹಾವಳಿಯಿಂದ ದೇಹಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತವೆ.

 

Author:

...
Sub Editor

ManyaSoft Admin

share
No Reviews