HEALTH TIPS :
ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳು
ಕೆಲವೊಂದು ಆಹಾರಗಳು, ಹಣ್ಣು ತರಕಾರಿಗಳು ಅದರಕ್ಕೆ ಕಹಿಯಾಗಿದ್ದರೂ ಉದರಕ್ಕೆ ಸಿಹಿಯಾಗಿರುತ್ತವೆ. ಆರೋಗ್ಯಕ್ಕೆ ಲೆಕ್ಕಕ್ಕೂ ಸಿಗದಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುವ ಕೆಲವೇ ಕೆಲವೊಂದು ತರಕಾರಿಗಳ ರುಚಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಅಂತಹ ತರಕಾರಿಗಳಲ್ಲಿ ಹಾಗಲಕಾಯಿ ಕೂಡ ಒಂದು. ತನ್ನಲ್ಲಿ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿರುವ ಈ ತರಕಾರಿ ಪ್ರಮುಖವಾಗಿ ದೇಹದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಹಾಗಲ ಕಾಯಿಯು ಇನ್ಸುಲಿನ್ನಂತೆ ಕಾರ್ಯನಿರ್ವಹಿಸುವ ಗುಣಲಕ್ಷಣಗಳನ್ನು ಹೊಂದಿದೆ.
*ಹಾಗಲಕಾಯಿಯಲ್ಲಿ ಹೇರಳವಾಗಿ ಮೆಗ್ನೀಸಿಯಮ್, ಪೊಟ್ಯಾಶಿಯಮ್, ಫೋಲೇಟ್, ಜಿಂಕ್, ಕಬ್ಬಿಣ, ವಿಟಮಿನ್ ಎ ಹಾಗೂ ವಿಟಮಿನ್ ಸಿ ನಂತಹ ಹಲವಾರು ಪ್ರಮುಖ ಪೋಷಕಾಂಶ ಗಳನ್ನು ಒಳಗೊಂಡಿರುತ್ತದೆ. ಇದು ಆಹಾರದಲ್ಲಿ ನಾರಿನ ಅಂಶದ ಅತ್ಯುತ್ತಮ ಮೂಲ ಎಂದು ಗುರುತಿಸಿಕೊಂಡಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಬೀಟಾ-ಕ್ಯಾರೋಟಿನ್ ಮಟ್ಟವನ್ನು ಇತರ ಯಾವುದೇ ತರಕಾರಿ ಮತ್ತು ಹಣ್ಣುಗಳಿಗಿಂತ ಎರಡು ಪಟ್ಟು ಹೆಚ್ಚಾಗಿ ಹೊಂದಿರುತ್ತದೆ.
*ಪ್ರತಿದಿನ ಹಾಗಲಕಾಯಿ ಜೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗುತ್ತದೆ ಮತ್ತು ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ ಎಂದು ಆಹಾರ ತಜ್ಞೆ ಹೇಳುತ್ತಾರೆ. ಇದು ಜೀರ್ಣಕ್ರಿಯೆ ಮತ್ತು ಚರ್ಮವನ್ನು ಸುಧಾರಿಸಲು ಸಹ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸ ಕುಡಿಯುವುದು ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಯಾಕೆಂದ್ರೆ ಈ ಸಮಯದಲ್ಲಿ ದೇಹವು ಹಾಗಲಕಾಯಿಯಲ್ಲಿರುವ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
*ಹಾಗಲಕಾಯಿ ರಸ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಒಂದು ರೀತಿಯ ಪ್ರೋಟೀನ್ ಆಗಿದೆ. ಆದ್ದರಿಂದ, ಹಾಗಲಕಾಯಿ ರಸವನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿರುವ ಜನರಿಗೆ ಪ್ರಯೋಜನಕಾರಿಯಾಗಿದೆ.