ಹಾವೇರಿ:
ಪತ್ನಿಯೊಬ್ಬಳು ತನ್ನ ಪತಿಯನ್ನು ಸಿನಿಮಾ ಶೈಲಿಯಲ್ಲಿ ಬರ್ಬರವಾಗಿ ಧಾರವಾಡದಲ್ಲಿ ಹತ್ಯೆಗೈದು ಬಂಕಾಪುರದಲ್ಲಿ ಶವ ಎಸೆದು ಹೋಗಿರುವಂತಹ ಘಟನೆ ನಡೆದಿದೆ.
ಹಾವೇರಿ ಮೂಡಸಾಲಗಿ ಗ್ರಾಮದ ನಿವಾಸಿ ಮಂಜುನಾಥ್ ಶಿವಪ್ಪ ಜಾದವ್ (45) ಮೃತ ದುರ್ದೈವಿಯಾಗಿದ್ದಾನೆ. ಈತನನ್ನು ಆತನ 3 ನೇ ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿ ಅಪಘಾತವೆಂಬಂತೆ ಬಿಂಬಿಸಲು ಯತ್ನಿಸಿದ್ದಾಳೆ. ಆದರೆ ಪೊಲೀಸರ ವಿಚಾರಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಮದು ಮತ್ತು ಆಕೆಯ ಮಕ್ಕಳಾದ ವಿನಯ್, ವಿಕಾಸ್ ಕೊಲೆ ಆರೋಪಿಗಳಾಗಿದ್ದಾರೆ. ಕೊಲೆಯಾದ ವ್ಯಕ್ತಿ ಮಧು ಎಂಬಾಕೆ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ನಂತರ ಮದುವೆಯಾಗಿದ್ದಾನೆ, ಆಕೆಗೆ ತನ್ನ ಜಮೀನು ಮಾರಿ ಬ್ಯೂಟಿಪಾರ್ಲರ್ ಹಾಕಿಕೊಟ್ಟಿದ್ದ, ಸುಮಾರು 2 ಕೋಟಿ ರೂಪಾಯಿ ಅಡಿಕೆ ತೋಟವನ್ನು ಈತ ಮದುಗಾಗಿ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿದೆ.
ಆದರೆ ಮಂಜುನಾಥ್ ಪತ್ನಿಯ ಅನೈತಿಕ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದ, ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ಆಗಿದೆ. ಈ ವೇಳೆ ಮನೆಯಲ್ಲಿ ಮಂಜುನಾಥನನ್ನು ಬರ್ಬರವಾಗಿ ಕೊಲೆಗೈದು ಕಾರಿನಲ್ಲಿ ಹೆಣ ಸಾಗಸಿ ಬಂಕಾಪೂರ ಹೊರವಲಯದಲ್ಲಿ ಶವ ಬಿಸಾಕಿ ಆರೋಪಿಗಳು ತೆರಳಿದ್ದಾರೆ. ಕೊಲೆ ಪ್ರಕರಣವನ್ನು ಆರೋಪಿಗಳು ಸಿನಿಮಾ ರೀತಿಯಲ್ಲಿ ನಡೆಸಿ ಅಪಘಾತವೆಂದು ಬಿಂಬಿಸಲು ಹೊರಟಿದ್ದರು. ಬಳಿಕ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಕೊಲೆ ಮಾಡಿರುವ ಕುರಿತು ಆರೋಪಿ ಮದು ಸತ್ಯ ಒಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.