ಇತ್ತೀಚಿಗೆ ಬೆಂಗಳೂರಿನ ಚಾಮರಾಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದ ಕ್ರೌರ್ಯ ಮರೆದಿರುವ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಮೈಸೂರಿನಲ್ಲಿ ಕಿಡಿಗೇಡಿಗಳು ಹಸುವಿನ ಬಾಲಕ್ಕೆ ಮಚ್ಚು ಹೊಡೆದು ಗಾಯಗೊಳಿಸಿರುವ ಪ್ರಕರಣ ಬೆಳಗೆ ಬಂದಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಅಮಾನವೀಯ ಘಟನೆ ನಡೆದಿತ್ತು. ಗರ್ಭ ಧರಿಸಿದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಲೇ ಇವೆ. ಇದೀಗ ಮನುಷ್ಯನೇ ಈ ಮೂಕ ಪ್ರಾಣಿಗಳ ಮೇಲೆ ಅಟ್ಟಹಾಸ ಮೆರೆಯುತ್ತಿರುವ ಕೃತ್ಯಗಳು ನಡೆಯುತ್ತಿವೆ.
ಕರ್ನಾಟಕದಲ್ಲಿ ಹಸುಗಳ ಮೇಲಿನ ಕ್ರೌರ್ಯ ಮೆರೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಹಾಸನದಲ್ಲಿ ಜಿಲ್ಲೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಮೇಲೆ ಕೀಚಕರು ಮಚ್ಚಿನಿಂದ ಮನಬಂದಂತೆ ಕೊಚ್ಚಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ನವೀನ್ ಎಂಬುವವರಿಗೆ ಸೇರಿದ ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ವೇಳೆ ದುರುಳರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಕರು ರಕ್ತದ ಮಡುವಿಲ್ಲಿ ನರಳಾಡುತ್ತಿದೆ.
ಜಾತಿ-ಮತಗಳನ್ನು ನೋಡದೆ ಹಾಲು ನೀಡುವ ಹಸುಗಳ ಮೇಲಿನ ಕೃತ್ಯಗಳು ಮುಂದುವರೆದಿದೆ. ಉತ್ತರ ಕನ್ನಡ, ಮೈಸೂರು ಹಾಗೂ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಮೇಲೆ ದಾಳಿ ಪ್ರಕರಣಗಳು ಬಾರೀ ಸದ್ದು ಮಾಡಿದ್ದವು. ಇದರ ಬೆನ್ನಲ್ಲೇ ಇದೀಗ ಹಾಸನದಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರು ಮೇಲೆ ದುರುಳರು ಮಚ್ಚಿನಿಂದ ಕೊಚ್ಚಿ ಕ್ರೌರ್ಯ ಮೆರೆದಿದ್ದಾರೆ.