ಹಾಸನ : ಅಕ್ರಮವಾಗಿ ತೋಟ ನಿರ್ಮಿಸಿಕೊಂಡಿದ್ದ ಅರಣ್ಯ ಭೂಮಿ ಒತ್ತುವರಿ ತೆರವು

ಹಾಸನ : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಡಬ ಗ್ರಾಮದಲ್ಲಿ ಅಕ್ರಮವಾಗಿ ದಬ್ಬಾಳಿಕೆ ಮಾಡಿ ಸುಮಾರು 27 ಎಕರೆ ಮೀಸಲು ಅರಣ್ಯ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು ತೋಟ ನಿರ್ಮಿಸಿಕೊಂಡಿದ್ದ ಭೂಮಿಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ವಶಪಡಿಸಿಕೊಂಡಿದೆ.

ಈ ಭೂಮಿಯಲ್ಲಿ ಅನಧಿಕೃತವಾಗಿ ತೋಟವನ್ನು ನಿರ್ಮಿಸಲಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ನೀಡಿದ ಸೂಚನೆಯ ಹಿನ್ನೆಲೆ ನಿರ್ದಿಷ್ಟ ಕ್ರಮ ಕೈಗೊಳ್ಳಲಾಯಿತು. ಅರಣ್ಯಾಧಿಕಾರಿಗಳ ತಂಡ ಜೆಸಿಬಿಗಳ ಸಹಾಯದಿಂದ ಅಕ್ರಮ ತೋಟ ತೆರವು ಕಾರ್ಯಾಚರಣೆ ನಡೆಸಿ, ಸುಮಾರು ₹15 ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಪುನಃ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದೆ. ಅಲ್ಲದೇ ಕಾರ್ಯಾಚರಣೆ ಬಳಿಕ ಸ್ಥಳದಲ್ಲಿ ವಿಶಿಷ್ಟ ಪ್ರಬೇಧದ ಸಸಿಗಳನ್ನು ನೆಡಲಾಗಿದ್ದು, ಅರಣ್ಯ ಪ್ರದೇಶ ಎಂಬ ಸೂಚನಾ ಫಲಕವನ್ನೂ ಸಹ ಅಳವಡಿಸಲಾಗಿದೆ.

ಈ ಬಗ್ಗೆ ಸಚಿವ ಈಶ್ವರ್‌ ಖಂಡ್ರೆ ಅವರು ಅರಣ್ಯ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿ ಎಲ್ಲರದ್ದಾಗಿದ್ದು, ಈ ಕಾರ್ಯಾಚರಣೆ ಮೂಲಕ ಜಿಲ್ಲೆಯಲ್ಲಿ ಅರಣ್ಯ ಭೂಮಿ ಕಬಳಿಕೆ ವಿರುದ್ಧವಾದ ಕಟ್ಟುನಿಟ್ಟಾದ ನಿಲುವಾಗಿದೆ. ಬೆಲೆಬಾಳುವ ಮರಗಳ ನಾಶ, ಅಕ್ರಮ ತೋಟ ನಿರ್ಮಾಣ ಮೊದಲಾದ ಅನೈತಿಕ ಚಟುವಟಿಕೆಗಳಿಗೆ ಇದು ಎಚ್ಚರಿಕೆಯ ಸಂದೇಶವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ. ಇಂತಹ ಕಾನೂನು ಉಲ್ಲಂಘನೆಗಳ ವಿರುದ್ಧ ನಿರಂತರವಾಗಿ ಕ್ರಮ ಜರುಗಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews