Hair care tips: ತಲೆ ಕೂದಲ ಬೆಳವಣಿಗೆಗೆ ಈ 2 ಪದಾರ್ಥಗಳನ್ನು ಬಳಸಿ..!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

Hair growth tips:

ಅಲೋವೆರಾ ಹಾಗೂ ಬೆಟ್ಟದ ನೆಲ್ಲಿಕಾಯಿ ಕೂದಲು ಬೆಳವಣಿಗೆಗೆ ಈ ಎರಡು ಪದಾರ್ಥಗಳು ಹಲವು ರೀತಿಯ ನ್ಯೂಟ್ರಿಷನ್​ಗಳನ್ನು ಹೊಂದಿವೆ. ಈ ಎರಡು ಪದಾರ್ಥಗಳು ಕೂದಲು ಬೆಳವಣಿಗೆಗೆ ಹಾಗೂ ಕೂದಲ ದಟ್ಟತೆಗೆ ತುಂಬಾ ಸಹಾಯಕಾರಿಯಾಗುತ್ತವೆ. ಈ ಎರಡು ಪದಾರ್ಥಗಳನ್ನು ತಲೆ ಕೂದಲು ಬೆಳವಣಿಗೆಗೆ ಹೇಗೆ ಬಳಸಬೇಕೆಂದರೆ.

ಅಲೋವೆರಾವನ್ನು ಶತಮಾನಗಳ ಕಾಲದಿಂದಲೂ ಸೌಂದರ್ಯವರ್ಧಕ ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹರವಾಗಿಯೇ ಉಪಯೋಗಿಸುತ್ತಾರೆ. ಅದರಲ್ಲೂ ಕೂದಲು ಬೆಳವಣಿಗೆಗೆ ವಿಚಾರದಲ್ಲಿ ಅಲೋವೆರಾವನ್ನು ಹೆಚ್ಚು ಉಪಯುಕ್ತ ಎನ್ನುತ್ತಾರೆ. ಕಾರಣ ಅಲೋವೆರಾದಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್​ಗಳು ಹೇರಳವಾಗಿ ಸಿಗುತ್ತವೆ ವಿಟಮಿನ್ ಎ,ಸಿ,ಇ ಯಂತಹ ಅಪರೂಪದ ವಿಟಮಿನ್​ಗಳು ಇವೆ. ಈ ವಿಟಮಿನ್​ಗಳು ತಲೆಗೂದಲು ವೃದ್ಧಿಗೆ ಸಹಾಯಕವಾಗಿ ನಿಲ್ಲುತ್ತವೆ.

ಅಲೋವೆರಾ ಉರಿಯೂತ ನಿರೋಧಕ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇದು ತಲೆಹೊಟ್ಟಿನಂತಹ ಸಮಸ್ಯೆಗಳನ್ನು ಬಹುಬೇಗ ದೂರ ಮಾಡಿ ಕೂದಲು ಬೆಳೆಯಲು ಸಹಾಯಕವಾಗಿ ನಿಲ್ಲುತ್ತದೆ. ಅದು ಅಲ್ಲದೇ ತಲೆಗೂದಲನ್ನು ಇದು ಒಣಗಲು ಬಿಡದೆ ತೇವಾಂಶವನ್ನು ಕಾಯ್ದುಕೊಳ್ಳುವ ಮೂಲಕ ಕೂದಲು ಸೀಳುವಿಕೆ, ಒಣಗುವಿಕೆಯಿಂದ ಕಾಪಾಡುತ್ತದೆ.

ಇನ್ನು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಆ್ಯಂಟಿಆಕ್ಸಿಡೆಂಟ್ಸ್​ ಹೇರಳವಾಗಿ ಸಿಗುತ್ತವೆ. ಇದು ದಟ್ಟವಾದ ಕೂದಲು ಬೆಳವಣಿಗೆಗೆ ಭದ್ರ ಬುನಾದಿಯನ್ನು ಹಾಕುತ್ತದೆ. ಬೆಟ್ಟದ ನೆಲ್ಲಿಕಾಯಿಯನ್ನ ವಿಟಮಿನ್ ಸಿ ಪವರ್​ಹೌಸ್ ಎಂದೇ ಕರೆಯಲಾಗುತ್ತದೆ. ಇದು ಹೊಸ ಕೂದಲು ಬೆಳೆಯುವಿಕೆಗೆ ಮತ್ತು ಆರೋಗ್ಯಕರ ಕೂದಲು ನಿರ್ವಹಣೆಗೆ ತುಂಬಾ ಅನುಕೂಲ. ಇದನ್ನು ನಿತ್ಯವೂ ಬಳಸುವುದರಿಂದ ದಟ್ಟ ಹಾಗೂ ಆರೋಗ್ಯಯುತವಾದ ಕೂದಲು ನಿಮ್ಮದಾಗುತ್ತದೆ.

Author:

...
Editor

ManyaSoft Admin

Ads in Post
share
No Reviews