Hair care tips : ಕೂದಲಿನ ಅನೇಕ ಸಮಸ್ಯೆಗೆ ಕರಿಬೇವಿನ ಎಲೆಗಳನ್ನು ಬಳಸುವುದು ಹೇಗೆ..?

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಕರಿಬೇವು ನಮ್ಮ ಕೂದಲ ಆರೈಕೆಗೆ ಸುಲಭವಾಗಿ ಸಿಗುವ ಗಿಡಮೂಲಿಕೆ. ಕರಿಬೇವಿನ ಮತ್ತು ಕಡ್ಡಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತ ಅಂಶಗಳಿವೆ. ಕೂದಲಿಗೆ ಹೊಳಪು ನೀಡಲು ಮತ್ತು ಕೂದಲಿನ ಬಿರುಕನ್ನು ತಡೆಯಲೂ ಇದರಲ್ಲಿರುವ ಅಂಶಗಳು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲಿನ ಬೇರುಗಳಿಗೆ ಬಲವನ್ನು ನೀಡುತ್ತವೆ. ಇದು ನಿಮ್ಮ ಕೂದಲನ್ನು ಒಡೆಯುವ ಅಥವಾ ಹಾನಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕೂದಲು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.

ಕರಿಬೇವಿನ ಎಲೆಗಳು ನೆತ್ತಿಯ ಮೇಲಿನ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಮತ್ತು ನೆತ್ತಿಯನ್ನು ಶುಚಿಯಾಗಿಡುವು -ದರಿಂದ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. 1 ಕಪ್ ಕರಿಬೇವಿನ ಎಲೆಗಳ ಪೇಸ್ಟ್, 1 ಮೊಟ್ಟೆ ಮತ್ತು 1 ಟೇಬಲ್ ಚಮಚ ತೆಂಗಿನ ಎಣ್ಣೆಯನ್ನು ಒಟ್ಟಿಗೆ ಮಿಶ್ರಣ ಮಾಡಿ. ನಿಮ್ಮ ಕೂದಲಿಗೆ ಮಿಶ್ರಣವನ್ನು ಹಚ್ಚಿ ಮತ್ತು 30-45 ನಿಮಿಷಗಳ ಕಾಲ ಬಿಡಿ ಮತ್ತು ತೊಳೆಯಿರಿ.

ಕೊಬ್ಬರಿ ಎಣ್ಣೆ ಅಥವಾ ತಲೆಗೆ ಹಚ್ಚುವ ಯಾವುದೇ ಎಣ್ಣೆಗೆ ಒಂದು ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ ಬಿಸಿ ಮಾಡಿ. ಎಣ್ಣೆ ತಣ್ಣಗಾದ ನಂತರ ಎಲೆಗಳನ್ನು ಹೊರತೆಗೆಯಿರಿ ಮತ್ತು ಎಣ್ಣೆಯನ್ನು ಬಾಟಲಿಯಲ್ಲಿ ಸಂಗ್ರಹಿಸಿ. ಈ ಎಣ್ಣೆಯನ್ನು ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ, 1 ರಿಂದ 2 ಗಂಟೆ ಬಿಟ್ಟು ಅಥವಾ ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಿರಿ.

ಕರಿಬೇವಿನ ಸೊಪ್ಪನ್ನು ನೆಲ್ಲಿಕಾಯಿ ಮತ್ತು ಮೆಂತ್ಯದೊಂದಿಗೆ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಬಿ ಇದ್ದು ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದನ್ನು ತಯಾರಿಸಲು ಅರ್ಧ ಕಪ್ ಕರಿಬೇವು ಮತ್ತು ಮೆಂತ್ಯ ಕಾಳನ್ನು ತೆಗೆದುಕೊಂಡು ಅದಕ್ಕೆ ಒಂದು ಸಣ್ಣ ತುಂಡು ನೆಲ್ಲಿಕಾಯಿಯನ್ನು ಸೇರಿಸಿ. ಅದನ್ನು ನುಣ್ಣಗೆ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ನೆತ್ತಿ ಹಾಗೂ ಕೂದಲಿಗೆ ಹಚ್ಚಿರಿ. 20 ರಿಂದ 30 ನಿಮಿಷಗಳ ಕಾಲ ಬಿಟ್ಟು ನಂತರ ಅದನ್ನು ತೊಳೆಯಿರಿ. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

Author:

...
Editor

ManyaSoft Admin

Ads in Post
share
No Reviews