ಗುಬ್ಬಿ: ಗುಬ್ಬಿಯಲ್ಲಿ ಪಾರ್ಕಿಂಗ್ ಸಮಸ್ಯೆ. | ವಾಹನ ಸವಾರರ ಪರದಾಟ

ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿರುವುದು.
ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿರುವುದು.
ತುಮಕೂರು

ಗುಬ್ಬಿ:

ಗುಬ್ಬಿ ಪಟ್ಟಣದ ಪ್ರಮುಖ ರಸ್ತೆಯಾದ M.G ರಸ್ತೆ ಹಲವು ರಸ್ತೆಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ. ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿದ್ದು ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ.

ಇನ್ನು ಈ ಹಿಂದೆ ಗುಬ್ಬಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದ ದಿವಂಗತ ಯು.ಆರ್. ಮಂಜುನಾಥ್ ಅವರು ಸಾರ್ವಜನಿಕರ ಅನುಕೂಲಕ್ಕೆ ರಸ್ತೆ ಬದಿಯಲ್ಲಿ ಯಾವ ಯಾವ ದಿನಗಳಲ್ಲಿ ಯಾವ ಯಾವ ಕಡೆ ಪಾರ್ಕಿಂಗ್ ಮಾಡಬೇಕು ಎಂದು ನಾಮಫಲಕ ಅಳವಡಿಸಿದರು. ಆದರೆ ನಂತರದ ದಿನಗಳಲ್ಲಿ ಈ ನಿಯಮ ಕೇವಲ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಗುಬ್ಬಿ ಪಟ್ಟಣದಲ್ಲಿ ಎಂ.ಜಿ ರಸ್ತೆ ಕಿರಿದಾದ ರಸ್ತೆ ಇದ್ದು, ಅತಿ ಹೆಚ್ಚು ವಾಹನ ದಟ್ಟಣೆ ಇದ್ದು, ರಸ್ತೆ ಅಗಲೀಕರಣ ಮಾಡುವ ಬಗ್ಗೆ ಚರ್ಚೆ ಆಗ್ತಿದೆ ಹೊರತು ಯಾವುದೇ ಅನುಷ್ಠಾನಕ್ಕೆ ಬಂದಿಲ್ಲ.  ಕಿರಿದಾದ ರಸ್ತೆ ಇರೋದ್ರಿಂದ ಏಕಮುಖ ಸಂಚಾರಕ್ಕೆ ಮಾತ್ರ ಸಾದ್ಯವಾಗಿದೆ, ಅಲ್ಲದೇ ಏಕಕಾಲಕ್ಕೆ ಎರಡು ದೊಡ್ಡ ವಾಹನ ಬಂದರೆ ರಸ್ತೆ ಸಂಚಾರ ನಿಂತು ಹೋಗಿ, ಒಂದಾದ ಮೇಲೆ ಒಂದರಂತೆ ವಾಹನ ನಿಧಾನವಾಗಿ ಸಂಚರಿಸುವ ಸ್ಥಿತಿ ಎದುರಾಗಿದೆ. ಇನ್ನಾದರೂ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಕಲ್ಪಿಸಿಕೊಡಬೇಕಿದೆ.

Author:

...
Editor

ManyaSoft Admin

Ads in Post
share
No Reviews