ಗುಬ್ಬಿ : KSRTC ಆಯ್ತು ಇದೀಗ ನಗರ ಸಾರಿಗೆ ಸರದಿ | ಡಿವೈಡರ್ ಗೆ ಬಸ್ ಡಿಕ್ಕಿ ಪ್ರಯಾಣಿಕರು ಪಾರು

ಗುಬ್ಬಿ:

ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸರಣಿ ಅಪಘಾತಗಳಂತಹ ಪ್ರಕರಣಗಳು ಮಾಸುವ ಮುನ್ನವೇ ನಗರ ಸಾರಿಗೆ ಅಪಘಾತಕ್ಕೀಡಾಗಿದೆ. ಹೌದು ಇಷ್ಟು ದಿನ KSRTC ಬಸ್‌ ಚಾಲಕರ ನಿರ್ಲಕ್ಷ್ಯಕ್ಕೆ ತುಮಕೂರಿನಲ್ಲಿ ಅಪಘಾತಗಳು ನಡೆಯುತ್ತಲೇ ಇದೆ. ಕಳೆದ 15 ದಿನಗಳ ಹಿಂದೆ ತುಮಕೂರಿನ ಟೌನ್‌ಹಾಲ್‌ ಸರ್ಕಲ್‌ ಬಳಿ KSRTC ಬಸ್‌ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿಯಾಗಿದ್ದ ಪ್ರಕರಣ ಮಾಸುವ ಮುನ್ನವೇ ಗುಬ್ಬಿಯಲ್ಲಿ ನಗರ ಸಾರಿಗೆಯೊಂದು ಅಪಘಾತಕ್ಕೀಡಾಗಿದೆ.

ಗುಬ್ಬಿ ಪಟ್ಟಣದಿಂದ ಹೆಬ್ಬೂರು ಮತ್ತು ಸಿ.ಎಸ್ ಪುರ ಸಂಪರ್ಕಿಸುವ ಕೇಶಿಪ್ ರಸ್ತೆಯಲ್ಲಿ ಬರುವ ಕಬ್ಬಿಣ ಸೇತುವೆಪಾಳ್ಯ ರಾಮದೇವರ ದೇವಸ್ಥಾನದ ಮುಂಭಾಗದ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಓರ್ವ ಮಹಿಳಾ ಪ್ರಯಾಣಿಕರಿಗೆ ಬೆನ್ನಿಗೆ ಪೆಟ್ಟಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಈ ರಸ್ತೆಯಲ್ಲಿ ಗ್ರಾಮೀಣ ಪ್ರದೇಶದ ಬಳಿ ರಸ್ತೆ ವಿಭಜಕ ನಿರ್ಮಾಣ ಮಾಡಿದ್ದು, ಎಲ್ಲಿಯೂ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ವಿಭಜಕಕ್ಕೆ ನಾಮಫಲಕ ಅಳವಡಿಸದಿರುವುದು ಅಪಘಾತಗಳಿಗೆ ಕಾರಣವಾಗ್ತಿವೆ. ಅಲ್ಲದೇ ಬಸ್‌ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಆರೋಪ ಮಾಡಲಾಗಿದ್ದು, ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 

Author:

...
Editor

ManyaSoft Admin

share
No Reviews