ಗುಬ್ಬಿ : ಕಾರುಗಳ ನಡುವೆ ಡೆಡ್ಲಿ ಆಕ್ಸಿಡೆಂಟ್‌ | ಪ್ರಯಾಣಿಕರು ಗ್ರೇಟ್ ಎಸ್ಕೇಪ್

ಗುಬ್ಬಿ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಗುಬ್ಬಿ ಪಟ್ಟಣದ ಬಿದ್ದ ಹನುಮಂತರಾಯಸ್ವಾಮಿ ದೇವಾಲಯದ ಹೈವೇಯಲ್ಲಿ ಈ ಅಪಘಾತ ನಡೆದಿದೆ. ಮಾರುತಿ ಸ್ವಿಫ್ಟ್‌ ಹಾಗೂ ಎರ್ಟಿಗಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಎರಡು ಕಾರುಗಳು ನಜ್ಜುಗುಜ್ಜಾಗಿವೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕಡೆಯಿಂದ ಬರ್ತಿದ್ದ ಮಾರುತಿ ಸ್ವಿಫ್ಟ್‌ ಕಾರಿಗೆ ತುಮಕೂರು ಕಡೆಯಿಂದ ಹೋಗ್ತಿದ್ದ ಎರ್ಟಿಗಾ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಫಾತದ ರಭಸಕ್ಕೆ ಕಾರುಗಳು ಜಜ್ಜುಗುಜ್ಜಾಗಿದೆ ಜೊತೆಗೆ ಕಾರಿನಲ್ಲಿದ್ದವರಿಗೆ ಗಾಯಗಳಾಗಿದೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇನ್ನು ಅಪಘಾತದಿಂದಾಗಿ ಹೈವೇಯಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಸ್ಥಳೀಯರೇ ಕಾರುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಗುಬ್ಬಿಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews