ಗುಬ್ಬಿ :
ಕೇಂದ್ರ ಸರ್ಕಾರದ ಆದೇಶದಂತೆ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ಕಳುಹಿಸುವ ಕ್ರಮ ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ ಬಿಜೆಪಿ ಈ ಯುದ್ಧದ ಸಮಯದಲ್ಲಿ ರಾಜ್ಯ ಸರ್ಕಾರ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿಲ್ಲ. ಹೀಗಾಗಿ ಸಹಿ ಅಭಿಯಾನ ಮಾಡುತ್ತೇವೆ ಅಂತಾ ಸಲ್ಲದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಗುಬ್ಬಿಯಲ್ಲಿ ಟೀಕಿಸಿದ್ದಾರೆ.
ಗುಬ್ಬಿ ತಾಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯ ಒಟ್ಟು 2 ಕೋಟಿ ರೂಗಳಲ್ಲಿ 4 ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಎಸ್ ಆರ್ ಶ್ರೀನಿವಾಸ್ ಪ್ರವಾಸಿಗರನ್ನು ಕೊಂದು ಕ್ರೂರತನ ತೋರಿದ ಉಗ್ರರ ಹುಟ್ಟಡಗಿಸುವ ಕೆಲಸ ನಮ್ಮ ಸೇನೆ ಮಾಡಿದೆ. ಕೇವಲ ಉಗ್ರರ ನೆಲೆಯನ್ನು ಧ್ವಂಸ ಮಾಡಿದ ನಮ್ಮ ಸೈನ್ಯ ಶಿಸ್ತು ಪಾಲನೆ ಮಾಡಿದೆ. ಆದರೆ ನಾಗರೀಕರ ಮೇಲೆ ದಾಳಿ ಮಾಡುವ ಪಾಕಿಸ್ತಾನಿ ಸೇನೆಗೆ ತಕ್ಕ ಪಾಠ ಕಲಿಸಬೇಕಿದೆ. ದೇಶದ ಅಖಂಡತೆಯ ವಿಚಾರ ರಾಜಕಾರಣ ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಎಇಇ ಚಂದ್ರಶೇಖರ್, ಎಇ ಗೋಪಿನಾಥ್ ಜಿ.ಹೊಸಹಳ್ಳಿ, ಗ್ರಾಮ ಪಂಚಾಯ್ತಿ ಚಿಕ್ಕಮ್ಮ, ಗಂಗಾಮಣಿ, ಮುಖಂಡರಾದ ದೊಡ್ಡಯ್ಯ, ಮಂಜಣ್ಣ ಸೇರಿದಂತೆ ಹಲವರು ಹಾಜರಿದ್ದರು.