ನವದೆಹಲಿ:
ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ಜನ ಸಾಮಾನ್ಯರು ಬದುಕಲು ಕಷ್ಟ ಪಡ್ತಾ ಇದ್ರು.. ಜೊತೆಗೆ ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಸಾಲ ಮಾಡಿ ಸಾಲದ ಮೇಲಿನ ಬಡ್ಡಿದರ ಹೆಚ್ಚಳದಿಂದ ಬಡವರು, ಮಧ್ಯಮ ವರ್ಗದವರು ಕಷ್ಟ ಪಡ್ತಾ ಇದ್ದರು, ಈ ಮಧ್ಯೆ ಮನೆ ಕಟ್ಟಿಸಲು, ವಾಹನ ತೆಗೆದುಕೊಳ್ಳಲು ಮುಂದಾಗುತ್ತಿರುವವರಿಗೆ ಆರ್‌ಬಿಐ ಗುಡ್‌ನ್ಯೂಸ್ ನೀಡಿದೆ. ಹೌದು ಆರ್‌ಬಿಐ ಇಂದು ರೆಪೋ ದರದ ಕುರಿತು ದೊಡ್ಡ ಘೋಷಣೆ ಮಾಡಿದ್ದು, ಇದರಿಂದ ಮನೆ, ವಾಹನ ಸಾಲ ಮಾಡುವವರಿಗೆ ಗುಡ್‌ನ್ಯೂಸ್ ನೀಡಿದೆ.
ಚಿಕ್ಕ ಪುಟ್ಟ ಮೈಕ್ರೋ ಫೈನಾನ್ಸ್‌ಗಳಿಂದ, ಸಂಘಗಳಿಂದ, ಚೀಟಿ ಹಾಕುವವರಿಂದ ಸಾಲ ಪಡೆದು ದುಪ್ಪಟ್ಟು ಬಡ್ಡಿ ಕಟ್ಟಿ ಕಟ್ಟಿ ಬಡವರು ಸಾಲಗಾರರಾಗುತ್ತಿದ್ದರು. ಈ ಮಧ್ಯೆ ಆರ್‌ಬಿಐ ಮಹತ್ವದ ಘೋಷಣೆ ಮಾಡಿದ್ದು ಜನರಿಗಂಥೂ ಬಿಗ್ ರಿಲೀಫ್ ಸಿಕ್ಕಂತಾಗಿದೆ, ಆರ್‌ಬಿಐ ಜನ ಸಾಮಾನ್ಯರ ನಿರೀಕ್ಷೆಯಂತೆ ಐದು ವರ್ಷಗಳ ಬಳಿಕ ಮೊದಲ ಬಾರಿಗೆ 25 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತಗೊಳಿಸಿದೆ. ಈ ಮೂಲಕ ರೆಪೋ ರೇಟ್ ಶೇಕಡಾ 6.25ಕ್ಕೆ ಇಳಿಕೆ ಆಗಿದೆ. ಸದ್ಯ ಶೇಕಡಾ 6.5ರಷ್ಟು ಆರ್‌ಬಿಐ ರೆಪೋ ದರ ಇತ್ತು. ಇದೀಗ ರೆಪೋ ರೇಟ್ ಶೇಕಡಾ 6.25ಕ್ಕೆ ಇಳಿಕೆ ಆಗಿರೋದರಿಂದ ಗೃಹ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಇಳಿಕೆ ಆಗಲಿದೆ.
ರೆಪೋ ದರ ಇಳಿಕೆಯಿಂದ ಗ್ರಾಹಕರಿಗೆ ವಿವಿಧ ಬ್ಯಾಂಕ್‌ಗಳು ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಲಿವೆ. ಇದರಿಂದ ಜನಸಾಮಾನ್ಯರಂಥೂ ಫುಲ್ ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ಆರ್‌ಬಿಐ ಏನೋ ರೆಪೋ ರೇಟ್ ಇಳಿಕೆ ಮಾಡಿದ್ದರಿಂದ ಜನರಿಗೆ ಲಾಭ ಸಿಗ್ತಾ ಇದ್ದು. ಆದಷ್ಟು ಬೇಗ ಬಡ್ಡಿ ದರ ಇಳಿಕೆ ಕ್ರಮ ಜಾರಿ ಆಗಲೆಂದು ಜನರು ಕಾಯ್ತಾ ಇದ್ದಾರೆ.