STATE : 17 ವರ್ಷಗಳ ನಿರೀಕ್ಷೆಯ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು [RCB] ತಂಡ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದು, ತಮ್ಮ ಅಭಿಮಾನಿಗಳಿಗೆ ಅಮೂಲ್ಯವಾದ ಸಂಭ್ರಮವನ್ನು ನೀಡಿದೆ. ಈ ಐತಿಹಾಸಿಕ ಗೆಲುವಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ [Thawar Chand Gehlot] ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
'ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ RCB ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಧೈರ್ಯ ಮತ್ತು ಉತ್ಸಾಹವನ್ನು ಪ್ರದರ್ಶಿಸುವ ಮೂಲಕ ಗಮನಾರ್ಹ ಗೆಲುವಿನ ನಗೆ ಬೀರಿದೆ. ಮುಂದಿನ ಪ್ರಯಾಣದಲ್ಲಿ ಆರ್ಸಿಬಿ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇನೆ ಎಂದು GEHLOT ಅವರು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಪ್ರಶಸ್ತಿ ಗೆಲುವು RCB ತಂಡದ ಶ್ರಮ ಮತ್ತು ಅಭಿಮಾನಿಗಳ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ರಾಜ್ಯಪಾಲರ ಅಭಿನಂದನೆಗಳು ತಂಡದ ಸಾಧನೆಗೆ ಮತ್ತಷ್ಟು ಮಹತ್ವವನ್ನು ನೀಡಿವೆ.