ಕೇಂದ್ರ ಬಿಜೆಪಿ ಸರ್ಕಾರವು ಕರ್ನಾಟಕದ ತಂಬಾಕು ಬೆಳೆಗಾರರಿಗೆ ಗುಡ್ನ್ಯೂಸ್ ನೀಡಿದೆ. ರಾಜ್ಯದಲ್ಲಿ ವಿವಿಧ ಕಾರಣಗಳಿಂದ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಭಾರೀ ಮಳೆ ಹಾಗೂ ಇಳುವರಿ ಕಡಿಮೆ ಬಂದು ರೈತರು ಸಂಕಷ್ಟದಲ್ಲಿ ಇದ್ದರು. ಆದರೆ ಇದೀಗ ಕೇಂದ್ರ ಸರ್ಕಾರವು ಕೊನೆಗೂ ಈ ಬೆಳಗಾರರಿಗೆ ಸಿಹಿಸುದ್ದಿ ನೀಡಿದೆ.
ರಾಜ್ಯದ ಅಂದಾಜು 70 ಸಾವಿರಕ್ಕೂ ಹೆಚ್ಚು ತಂಬಾಕು ಬೆಳಗಾರರಿಗೆ ಕೇಂದ್ರ ಸರ್ಕಾರವು ತಂಬಾಕು ಬೆಳೆಗಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡದೆ ಹಾಗೂ ಅನಧಿಕೃತ ತಂಬಾಕನ್ನು ಸಹ ತಂಬಾಕು ಮಂಡಳಿಯ ಹರಾಜಿನ ಮೂಲಕ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದ ರೈತರಿಗೆ ವೆಚ್ಚ ತಗ್ಗಲಿದೆ. ರೈತರ ನಷ್ಟ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಬರೋಬ್ಬರಿ 70,000 ಸಾವಿರಕ್ಕೂ ಹೆಚ್ಚು ತಂಬಾಕು ಬೆಳೆಯುವ ರೈತರಿಗೆ ಸಹಕಾರಿಯಾಗಿರಲಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ , ಶಾಸಕ ಬಿ. ವೈ ವಿಜಯೇಂದ್ರ ಅವರು ರಾಜ್ಯದ ತಂಬಾಕು ಬೆಳೆಯುವ ರೈತರು ಭಾರೀ ಮಳೆಯಿಂದಾಗಿ ಹಾಗೂ ಕರ್ನಾಟಕದ ಎಫ್ ಸಿವಿ ತಂಬಾಕು ರೈತರ ಬೆಳೆ ಇಳುವರಿ ಕಡಿಮೆಯಾಗಿ, ಎಲೆಗಳ ಗುಣಮಟ್ಟದಲ್ಲಿ ನಷ್ಟ ಎದುರಿಸಿದ್ದ ಕಾರಣ ಮಧ್ಯಪ್ರವೇಶಿಸಿ ರೈತರ ನೆರವಿಗೆ ಧಾವಿಸಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾಡಿನ ತಂಬಾಕು ಬೆಳಗಾರ ರೈತರ ಪರವಾಗಿ ಅಭಿನಂದನೆ ಎಂದು ತಿಳಿಸಿದ್ದಾರೆ. ಹಾಗೂ ಯಾವುದೇ ಹೆಚ್ಚವರಿ ಶುಲ್ಕವಿಲ್ಲದೇ ರೈತರು ನ್ಯಾಯಯುತವಾಗಿ ಮಾರುಕಟ್ಟೆ ಬೆಲೆಯನ್ನು ಪಡೆಯುವಂತಾಗಿದೆ, ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.