ತುಮಕೂರು:
ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ, ತುಮಕೂರಿಗರ ಮೆಚ್ಚುಗೆಗೆ ಪಾತ್ರವಾಗಿರುವ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿ, ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ತನ್ನ ಮೂರನೇ ಶಾಖೆಯನ್ನು ಉದ್ಘಾಟಿಸಿದೆ.
ನಗರದ ವಾಣಿಜ್ಯ ವ್ಯವಾಹರಗಳ ಹೃದಯಭಾಗದಂತಿರುವ ಮಂಡಿಪೇಟೆಯಲ್ಲಿ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿಯ ಮೂರನೇ ಬ್ರ್ಯಾಂಚ್ ಶುಭಾರಂಭಗೊಂಡಿದೆ. ಮಂಡಿಪೇಟೆಯ ಚರ್ಚ್ ಎದುರು ಕಾರ್ಯಾರಂಭ ಮಾಡುತ್ತಿರುವ ನೂತನ ಶಾಖೆಯನ್ನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದ್ರು. ಸೊಸೈಟಿಯ ನೂತನ ಶಾಖೆಯನ್ನ ಉದ್ಘಾಟಿಸಿದ ಬಳಿಕ ಆಶಿರ್ವಚನ ನೀಡಿದ ಸ್ವಾಮೀಜಿ, ಮುಂದಿನ ದಿನಗಳಲ್ಲಿ ಈ ಸೊಸೈಟಿ ಇನ್ನಷ್ಟು ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.
ಇನ್ನು ಸನ್ನದು ಲೆಕ್ಕಿಗರಾದ ಎಸ್.ವಿಶ್ವನಾಥ್ ಮಾತನಾಡಿ, ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕಿನ ಮುಂದಿನ ಯೋಜನೆಗಳಿಗೆ ಶುಭ ಹಾರೈಸಿದರು.
ಇನ್ನು ನೂತನ ಶಾಖೆ ಕಾರ್ಯಾರಂಭಗೊಂಡಿರೋದ್ರಿಂದ ಗ್ರಾಹಕರು ಕೂಡ ಹರ್ಷವನ್ನ ವ್ಯಕ್ತಪಡಿಸಿದ್ರು. ಸುದೀರ್ಘ ಸಮಯದಿಂದ ತುಮಕೂರಿನ ಜನತೆ ಈ ಶಾಖೆಯ ನಿರೀಕ್ಷೆಯಲ್ಲಿದ್ದು ಇಂದು ಅದು ನನಸಾಗಿದೆ. ಈ ಸೊಸೈಟಿ ನಮ್ಮ ತುಮಕೂರಿನ ಜನರಿಗೆ ಉತ್ತಮ ಸೇವೆ ನೀಡುತ್ತಿದೆ . ಧೈರ್ಯವಾಗಿ ಎಲ್ಲರೂ ಇದರ ಸದುಪಯೋಗ ಪಡೆಯಲಿ ಎಂದು ಗ್ರಾಹಕರು ಸಂತಸ ವ್ಯಕ್ತಪಡಿಸಿದರು.
ಸದಾ ಉತ್ತಮ ಸೇವೆಗಳನ್ನ ನೀಡುತ್ತಾ, ತುಮಕೂರಿಗರ ವಿಶ್ವಾಸಾರ್ಹತೆಗೆ ಪಾತ್ರವಾಗುತ್ತಾ ಮುನ್ನುಗ್ಗುತ್ತಿರುವ ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ಧ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಗೆ ಪ್ರಜಾಶಕ್ತಿ ಪರಿವಾರದಿಂದಲೂ ಶುಭ ಹಾರೈಕೆಗಳು.