ಬೆಂಗಳೂರು: ಸರ್ಕಾರ ಬಿ ಖಾತಾ ಸಂಬಂಧಿಸಿದಂತೆ ಹಲವಾರು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದಾಗಿ ಸಾವಿರಾರು ಬಿ ಖಾತಾ ಆಸ್ತಿದಾರರಿಗೆ ಇನ್ನೊಮ್ಮೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ಶೀಘ್ರದಲ್ಲೆ ಬಿ-ಖಾತಾ ಸೈಟ್ ಗಳ ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಈ ಹಿಂದೆ ನೋಂದಣಿ ಆಗದೆ ಉಳಿದಿದ್ದ ಬಿ ಖಾತಾ ಸೈಟ್ ಮಾಲೀಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಆಸ್ತಿ ಮಾಲೀಕರಿಗೆ ಬ್ಯಾಂಕ್ ಸಾಲ, ವಿದ್ಯುತ್-ನೀರು ಸಂಪರ್ಕ, ಮತ್ತು ಕಾನೂನು ಮಾನ್ಯತೆ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿತ್ತು. ಆದರೆ ಈಗ, ಸರ್ಕಾರದ ಹೊಸ ನಿರ್ಧಾರದಿಂದಾಗಿ ಈ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
ಇದೀಗ ಬಿ ಖಾತಾ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿರುವುದರಿಂದ ಸೈಟ್ ರಿಜಿಸ್ಟ್ರೇಷನ್ ಆಗದೇ ಇರುವ ಆಸ್ತಿದಾರರಿಗೆ ಸರ್ಕಾರವು ಇದೀಗ ಹೊಸ ಅವಕಾಶವನ್ನು ನೀಡಿದೆ. ಜೂನ್ ಮೊದಲ ವಾರದಿಂದಲೇ ಮತ್ತೆ ಬಿ ಖಾತಾ ನಿವೇಶನಗಳನ್ನು ನೋಂದಣಿ ಶುರು ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಸರ್ಕಾರದ ಈ ಹೆಜ್ಜೆಯಿಂದ ಜನರಿಗೆ ಹಲವು ಸಂಕಷ್ಟಗಳಿಂದ ಬಿಡುಗಡೆ ಸಿಕ್ಕಿದ್ದು, ಬಿ ಖಾತಾ ಹೊಂದಿರುವ ಸೈಟ್ ಮಾಲೀಕರು ತಮ್ಮ ಆಸ್ತಿಯನ್ನು ಈಗ ನಿರಾಳವಾಗಿ ನೋಂದಾಯಿಸಿಕೊಳ್ಳಬಹುದು.