ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಚಿನ್ನ ಅಂದ್ರೆ ಪಂಚಾಪ್ರಾಣ. ಇನ್ನು ಮದುವೆ ಆದ ಹೆಣ್ಣು ಮಕ್ಕಂತು ಹಬ್ಬ ಹರಿದಿನ ಬಂತಂದ್ರೆ ಗಂಡ ಚಿನ್ನ ಕೊಡಿಸುವವರೆಗೂ ಬಿಡೋದಿಲ್ಲ. ಇಂತಹ ಚಿನ್ನ ಕೊಳ್ಳುವ ಹೆಣ್ಣು ಮಕ್ಕಳಿಗೆ ಚಿನ್ನ ಶಾಕ್ ನೀಡಿದೆ. ಕಾರಣ 10 ಗ್ರಾಮ ಚಿನ್ನ ಈಗ 1 ಲಕ್ಷದ ಗಡಿದಾಟಿದೆ.
ಆದರೆ ಇತ್ತೀಚಿನ ಬೆಲೆ ಏರಿಕೆ ಪ್ರಕ್ರಿಯೆಗಳು ಎಂತಹ ಶ್ರೀಮಂತರನ್ನೂ ಸಹ ಚಿನ್ನ ಖರೀದಿ ಮಾಡುವಾಗ ಹಿಂದೆ ಕಾಲಿಡುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ದಿನೇ ದಿನೇ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇದೆ. ಇದೀಗ ಒಂದು ಲಕ್ಷ ಗಡಿ ದಾಟಿದ್ದು, ಜನರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಗಿದೆ.
ಏಪ್ರಿಲ್ 22, 2025 ರಂದು ಅಂದರೆ ಇಂದು ಚಿನ್ನದ ಬೆಲೆ ಒಂದೇ ಬಾರಿಗೆ ತುಂಬಾ ದುಬಾರಿ ಆಗಿದೆ. ಇಂದು ಚಿನ್ನದ ದರ 1 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆ ಪಡೆದಿದೆ.ಇಂದು 24 ಕ್ಯಾರೆಟ್ ಚಿನ್ನದ ಬೆಲೆ 3,000 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 1,01,350 ರೂ.ಗಳಿಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆಯೂ 10 ಗ್ರಾಂಗೆ 92,900 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಬೆಳ್ಳಿಕೂಡ ಒಂದು ಲಕ್ಷ ರೂಪಾಯಿಗಳನ್ನು ದಾಟಿ ಪ್ರತಿ ಕೆಜಿಗೆ 1,01,000 ರೂಪಾಯಿಗಳನ್ನು ತಲುಪಿದೆ.