ತುಮಕೂರು : ಪ್ರತಿಷ್ಠಿತ ಶಾಲೆಯ ಬಳಿ ಕಸವೋ..ಕಸ | ದುರ್ನಾತದಲ್ಲೇ ಮಕ್ಕಳಿಗೆ ಪಾಠ

ತುಮಕೂರು :  ದಿನೇ ದಿನೆ ಸ್ಮಾರ್ಟ್‌ ಸಿಟಿ, ಶೈಕ್ಷಣಿಕ ನಗರಿ ಅಂತಾ ಹೆಸರು ಪಡೆದಿರೋ ತುಮಕೂರು ನಗರ ಗಾರ್ಬೇಜ್‌ ಸಿಟಿ ಎಂಬ ಹಣೆಪಟ್ಟಿ ಪಡೆದುಕೊಳ್ತಿದೆ. ಕಸದ ನಿರ್ವಹಣೆಗೆ ಅದೆಷ್ಟು ಕ್ರಮ ಕೈಗೊಂಡ್ರು ಒಂದ್ಕಡೆ ಪಾಲಿಕೆ ನಿರ್ಲಕ್ಷ್ಯ, ಮತ್ತೊಂದ್ಕಡೆ ಜನರ ಸೋಂಬೇರಿತನ. ಹೀಗಾಗಿ ಜನರು ಎಲ್ಲೆಂದರಲ್ಲಿ ಕಸ ಸುರಿಯುತ್ತಿರೋದು ಕಸದ ಸಮಸ್ಯೆಗೆ ಪ್ರಮುಖ ಕಾರಣವಾಗ್ತಿದೆ. 

ತುಮಕೂರು ನಗರದ ವಾರ್ಡ್‌ ನಂಬರ್‌ 19ರ ಬಳಿ ಇರೋ ಶುಭೋದಯ ಆಂಗ್ಲ ಶಾಲೆ ಪಕ್ಕದಲ್ಲಿ  ಎಲ್ಲೆಂದರಲ್ಲಿ ಕಸ ಬಿದ್ದಿದ್ದರೂ ಕೂಡ ಸ್ವಚ್ಛತಾ ಸಿಬ್ಬಂದಿ ಸ್ವಚ್ಛತೆ ಮಾಡದೇ ಇರೋದ್ರಿಂದ ಕಸದ ಸಮಸ್ಯೆ ತಲೆದೋರಿದೆ. ಕಸ ಮಳೆಗೆ ನೆಂದು ದುರ್ನಾತ ಬೀರ್ತಾ ಇದ್ದು, ಜನರಂಥೂ ಮೂಗು ಮುಚ್ಚಿಕೊಂಡು ಓಡಾಡೋ ದುಸ್ಥಿತಿ ಇದೆ. ಶುಭೋದಯ ಸ್ಕೂಲ್‌ ಅಕ್ಕ- ಪಕ್ಕದ ಜನರೇ ಕಸವನ್ನು ತಂದು ಇಲ್ಲಿ ತಂದು ಸುರಿದು ಹೋಗ್ತಾ ಇರೋದ್ರಿಂದ ಕಸದ ಸಮಸ್ಯೆ ಆಗ್ತಿದೆ. ಇತ್ತ ರಾಶಿ ರಾಶಿ ಕಸ ಕಾಣಿಸ್ತಾ ಇದ್ರು ಪಾಲಿಕೆಯೂ ಕೂಡ ಕಸ ಎತ್ತದೇ ಇರೋದ್ರಿಂದ ಶಾಲೆಯ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಎದುರಾಗೋ ಭೀತಿ ಶುರುವಾಗಿದೆ.

Author:

...
Keerthana J

Copy Editor

prajashakthi tv

share
No Reviews